ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ರವಿವಾರ ನಸುಕಿನಲ್ಲಿ ವಾಯುವಿಹಾರಿಗಳನ್ನು ಭೇಟಿಯಾಗಿ ಮತಯಾಚಿಸಿದರು.ನಗರದ ರೇಸ್ ಕೋರ್ಸ್ ಮೈದಾನ ಸೇರಿದಂತೆ ವಿವಿಧಡೆ ಅವರು ಹಿರಿಯರಲ್ಲಿ ಈ ಬಾರಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಡಾ. ರವಿ ಪಾಟೀಲ ಅವರಿಗೆ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಈ ಬಾರಿ ಬಿಜೆಪಿಯಿಂದ ಟಿಕೆಟ್ ದೊರೆಯಲಿದೆ ಎಂದು ಜನಜೀವಾಳ ಸಾಕಷ್ಟು ಮೊದಲೇ ಭವಿಷ್ಯ ನುಡಿದಿತ್ತು.
ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರವಿ ಪಾಟೀಲ ಅವರನ್ನು ಪಕ್ಷ ಅಚ್ಚರಿ ರೀತಿಯಲ್ಲಿ ಈ ಬಾರಿ ಆಯ್ಕೆ ಮಾಡಿದೆ. ಯುವಕರು ಹಾಗೂ ಕ್ರಿಯಾಶೀಲರಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಕ್ಷೇತ್ರದಲ್ಲಿ ಸುತ್ತಾಡಿ ಸಂಚಲನ ಮೂಡಿಸುತ್ತಿರುವ ಅವರ ಕಾರ್ಯವೈಖರಿ ಎಲ್ಲರ ಮನ ಗೆದ್ದಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹಾಗೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮನವರಿಕೆ ಮಾಡಿದರು. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈ ಬಾರಿ ತಾನು ಗೆಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ. ತಾನು ಶಾಸಕನಾದರೆ ನನ್ನದೇ ಆದ ಯೋಜನೆಗಳ ಮೂಲಕ ಬೆಳಗಾವಿಯನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವೆ. ಬೆಳಗಾವಿಯನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸುವೆ. ಜನರ ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಆದ್ಯತೆ ನೀಡಿ ಆರೋಗ್ಯ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಿರುವ ತಾವೆಲ್ಲರೂ ನನ್ನ ಬೆಂಬಲಕ್ಕೆ ಬರಬೇಕು ಎಂದು ಅವರು ಮನವಿ ಮಾಡಿದರು.
ನಿಸರ್ಗ ಯೋಗ ಮಂಡಲದ ಪದಾಧಿಕಾರಿಗಳಾದ ಗಿರೀಶ ಹತ್ತರಕಿ, ಉಲ್ಲಾಸ ಬಾಳೇಕುಂದ್ರಿ, ಡಾ. ಶ್ರಾವಗೆ, ಹರಗುಡೆ, ಪ್ರವೀಣ ಖೋಡಾ, ರಾಜೇಶ ಕಾಮತ, ಆನಂದ ಜಮಖಂಡಿ, ಶಿವಾಜಿರಾವ ಪವಾರ, ಏಳಕೋಟಿ ಎಸ್, ಚಂದುಬಾಯಿ ಶಾ ಹಾಜರಿದ್ದರು.
ಡಾ. ರವಿ ಪಾಟೀಲ ಅವರಿಗೆ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಈ ಬಾರಿ ಬಿಜೆಪಿಯಿಂದ ಟಿಕೆಟ್ ದೊರೆಯಲಿದೆ ಎಂದು ಜನಜೀವಾಳ ಸಾಕಷ್ಟು ಮೊದಲೇ ಭವಿಷ್ಯ ನುಡಿದಿತ್ತು.