ಕಲಬುರಗಿ :
ಚುನಾವಣಾ ಪ್ರಯುಕ್ತ ಕರ್ನಾಟಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಲಬುರಗಿಯಲ್ಲಿ ಮಂಳವಾರ ಮಕ್ಕಳೊಂದಿಗೆ ಲಘು ಸಂವಾದ ನಡೆಸಿದರು.
ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದರು. ಆದರೆ, ಅದಕ್ಕೂ ಮೊದಲು, ಮೋದಿ ಅವರು ತಮಗಾಗಿ ಕಾಯುತ್ತಿದ್ದ ಮಕ್ಕಳ ಗುಂಪಿನೊಂದಿಗೆ ಕೆಲಕಾಲ ಮಾತನಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿಯವರು ಮಕ್ಕಳಿಗೆ ನೀವೆಲ್ಲರೂ ಶಾಲೆಗೆ ಹೋಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು, “ಹೌದು ಸಾರ್ ” ಎಂದು ಉತ್ತರಿಸಿದರು. ನಂತರ ಅವರೊಡನೆ ಕೆಲಕಾಲ ಮನರಂಜೆ ಆಟವಾಡಿದ್ದಾರೆ. ಮತ್ತು ಎಲ್ಲರೂ ಚೆನ್ನಾಗಿ ಓದುವಂತೆ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಮಕ್ಕಳ ಭವಿಷ್ಯದ ಗುರಿಗಳ ಬಗ್ಗೆ ಒಂದೊಂದಾಗಿ ಕೇಳಿದರು. ನೀವು ದೊಡ್ಡವರಾದ ಮೇಲೆ ಅವರು ಏನಾಗಬೇಕೆಂದು ಬಯಸಿದೀರಾ ಎಂದು ಮಕ್ಕಳನ್ನು ಕೇಳಿದರು. ಇದಕ್ಕೆ ಒಂದು ಮಗು ತಾನು ಪೊಲೀಸ್ ಆಗಲು ಬಯಸುತ್ತೇನೆ ಎಂದು ಹೇಳಿದರೆ, ಮತ್ತೊಬ್ಬರು “ನಿಮ್ಮ (ಪ್ರಧಾನಿ) ಕಾರ್ಯದರ್ಶಿ” ಎಂದು ಹೇಳಿದ್ದಾರೆ. ಅದಕ್ಕೆ ಪ್ರಧಾನಿ ಅವರನ್ನು ನಿಮಗೆ ದೇಶದ ಪ್ರಧಾನಿಯಾಗುವ ಇಚ್ಛೆ ಇಲ್ಲವೇ ಎಂದು ಎಂದು ಕೇಳಿದ್ದಾರೆ.
ಈ ಹಿಂದೆಯೂ ಕೂಡ ಪ್ರಧಾನಿ ಮೋದಿ ಅವರು ಹಲವು ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು.
ಏತನ್ಮಧ್ಯೆ, ರೋಡ್ಶೋ ಸಮಯದಲ್ಲಿ, ಜನರು ರಸ್ತೆಯ ಎರಡೂ ಬದಿಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಧಾನಿಯವರು ಸಾಗುತ್ತಿದ್ದಾಗ ಅವರಿಗೆ ಜಯಕಾರ ಹಾಕಿದರು. ಅವರ ಮೇಲೆ ಹೂವಿನ ದಳಗಳನ್ನೂ ಸುರಿಸಿದ್ದರು.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಚಾರಕ್ಕೆ ಪ್ರಮುಖ ಉತ್ತೇಜನ ನೀಡುವಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಬೃಹತ್ ರೋಡ್ಶೋಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದರು.
ಪ್ರಧಾನಿ ಮೋದಿ ಅವರು ಎರಡ್ಮೂರು ದಿನಗಳ ಹಿಂದೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಿದ್ದರು. ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರೀ ಪ್ರಚಾರ ನಡೆಸುತ್ತಿದ್ದಾರೆ.