ಚವ್ವ ಎಂಬ ಮರಾಠಿ ಸಿನಿಮಾದಲ್ಲಿನ ಪಾತ್ರಕ್ಕೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಧ್ವನಿ ನೀಡಲಿದ್ದಾರೆ. ಹಾಗಾಗಿ ಅವರು ಮರಾಠಿ ಭಾಷೆಯ ಸಂಭಾಷಣೆಗಳನ್ನು ಸರಿಯಾಗಿ ಉಚ್ಛರಿಸಬೇಕು. ಆದ್ದರಿಂದ 4 ವಾರಗಳ ಕಾಲ ಅವರು ವಿಶೇಷ ತರಬೇತಿ ಪಡೆದುಕೊಂಡು ಮರಾಠಿ ಕಲಿತಿದ್ದಾರೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ. ಈ ಸಿನಿಮಾಗೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಲಿದ್ದಾರೆ.
ಬೆಳಗಾವಿ : ಕನ್ನಡದ ನೆಲದಲ್ಲಿ ಹುಟ್ಟಿ ಚಲನಚಿತ್ರ ರಂಗದಲ್ಲಿ ಅಪಾರ ಹೆಸರು ಮಾಡಿರುವ ಖ್ಯಾತನಾಮ ನಟಿ ಇದೀಗ ಮರಾಠಿ ಭಾಷೆ ಕಲಿಯಲು ಮುಂದಾಗಿರುವುದು ಹಳೆಯ ಸುದ್ದಿ.
ಕೊಡಗಿನ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಅವರು ಭಾಷೆಗಳ ಗಡಿ ಮೀರಿ ಬೆಳೆಯುತ್ತಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಪಾತ್ರಕ್ಕೆ ತಕ್ಕಂತೆ ಭಾಷೆಗಳನ್ನು ಅವರು ಕಲಿಯುತ್ತಿದ್ದಾರೆ. ಮರಾಠಿ ಭಾಷೆ ಕಲಿಯಲು ರಶ್ಮಿಕಾ ಮಂದಣ್ಣ ಅವರು 4 ವಾರಗಳ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಅವರ ಜೊತೆ ವಿಕ್ಕಿ ಕೌಶಲ್ ಅವರು ಸಹಾ ಮರಾಠಿ ಕಲಿಕೆಯಲ್ಲಿ ನಿರತರಾಗಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ
ಅತ್ಯಂತ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹತ್ತಾರು ಅವಕಾಶಗಳು ಸಿಗುತ್ತಿವೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಬಾಲಿವುಡ್ನಲ್ಲಿ ರಶ್ಮಿಕಾ ಅವರು ಸಖತ್ ಶೈನ್ ಆಗುತ್ತಿದ್ದಾರೆ. ಈಗ ಅವರು ವಿಕ್ಕಿ ಕೌಶಲ್ ಜೊತೆ ‘ಚವ್ವ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಸಲುವಾಗಿ ಮರಾಠಿ ಕಲಿತಿದ್ದಾರೆ ಎಂದು ಸುದ್ದಿಯಾಗಿದೆ. ಇದು ಹಿಂದಿ ಸಿನಿಮಾ. ಹಾಗಿದ್ದರೂ ಪಾತ್ರಕ್ಕಾಗಿ ಮರಾಠಿ ಕಲಿಯುವುದು ಅಗತ್ಯವಾಗಿದೆ.
ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನದ ಕಥೆಯನ್ನು ಆಧರಿಸಿ ‘ಚವ್ವ’ ಸಿನಿಮಾ ಮೂಡಿಬರುತ್ತಿದೆ. ಶಿವಾಜಿಯ ಪುತ್ರನಾದ ಸಂಭಾಜಿ ಓರ್ವ ಮರಾಠಿ ವೀರ. ಸಂಭಾಜಿ ಪತ್ನಿ ಎಸುಬಾಯಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರು ನಿಭಾಯಿಸಲಿದ್ದಾರೆ. ಈ ಚಿತ್ರದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿವೆ. ಹಾಗಾಗಿ ಕಲಾವಿದರು ಮರಾಠಿ ಕಲಿಯುತ್ತಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆದ ರಶ್ಮಿಕಾ ಮಂದಣ್ಣ ಅವರನ್ನು ಬಾಲಿವುಡ್ ಕೂಡ ಕೈ ಬೀಸಿ ಕರೆಯಿತು. ‘ಅನಿಮಲ್’ ಸಿನಿಮಾದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ಹಾಗಾಗಿ ಹಿಂದಿ ಸಿನಿಮಾ ಮಂದಿಗೆ ರಶ್ಮಿಕಾ ಫೇವರಿಟ್ ಆಗಿದ್ದಾರೆ. ‘ಚವ್ವ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಲಿದ್ದಾರೆ.
ಇತ್ತೀಚೆಗೆ ‘ಬ್ಯಾಡ್ ನ್ಯೂಸ್’ ಸಿನಿಮಾದ ‘ತೋಬಾ ತೋಬಾ..’ ಹಾಡಿನಿಂದ ವಿಕ್ಕಿ ಕೌಶಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಿನದಿಂದ ದಿನಕ್ಕೆ ಅವರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಮೊದಲು ಒಂದು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅವರು ತೆರೆ ಹಂಚಿಕೊಂಡಿದ್ದರು. ಆ ಜಾಹೀರಾತು ವಿವಾದ ಸೃಷ್ಟಿ ಮಾಡಿತ್ತು.