ಬೆಳಗಾವಿ :
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಬೆಳಗಾವಿ ಮಹಾನಗರದಲ್ಲಿ ಸ್ವಾಗತಿಸಿಕೊಳ್ಳುವವರು ಯಾರು ಗೊತ್ತೇ ?
ಪ್ರಧಾನಿ ಮೋದಿಯವರನ್ನು ಜನಪ್ರತಿನಿಧಿಗಳ ಬದಲು , ಕಾಯಕಯೋಗಿಗಳು ಸ್ವಾಗತಿಸಲಿದ್ದಾರೆ . ಇಂಥದ್ದೊಂದು ನೂತನ ಪ್ರಯೋಗಕ್ಕೆ ರಾಜ್ಯ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಮೋದಿಯವರ ಸ್ವಾಗತಕ್ಕೆ ಈಗಾಗಲೇ ಐದು ಜನ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ .
ನೇಕಾರ ಕಲ್ಲಪ್ಪ ಟೊಪಗಿ , ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ರೈತ ಮಹಿಳೆ ಶೀಲಾ ಖನ್ನೂಕರ , ಕೂಲಿ ಕಾರ್ಮಿಕ ಮಂಗೇಶ ಬಸ್ತವಾಡಕರ ಹಾಗೂ ಅಟೋ ಚಾಲಕ ಮಯೂರ ಚವ್ಹಾಣ್ ಅವರಿಗೆ ಮೋದಿಯವರನ್ನು ಬರಮಾಡಿಕೊಳ್ಳುವ ಅವಕಾಶ ದೊರೆತಿದೆ . ಈ ಹಿನ್ನೆಲೆ ಕಾರ್ಮಿಕರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ .