ಬೆಳಗಾವಿ: ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಸೋಮವಾರದಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಪ್ರತಿಷ್ಠಿತರು ತಮ್ಮ ಪಣವನ್ನು ಕಣಕ್ಕಿಟ್ಟು ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಚಿಕ್ಕೋಡಿಯ ಶಾಸಕ ಗಣೇಶ ಹುಕ್ಕೇರಿ, ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಅಪ್ಪಾ ಸಾಹೇಬ ಕುಲಗುಡೆ ಅವರು ಚುಕ್ಕಾಣಿ ಹಿಡಿಯಲು ಮುಂದಾಗಿದ್ದು, ಈಗ ಇವರ ಹೆಸರುಗಳು ಮುಂಚೂಣಿಯಲ್ಲಿ ಚಲಾವಣೆಯಲ್ಲಿವೆ. ಇವರನ್ನು ಬಿಟ್ಟು ಮತ್ತೊಬ್ಬರು ಆಯ್ಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇವರ ಪರವಾಗಿ ನಾಯಕರು ತೆರೆಯ ಹಿಂದೆ ತಮ್ಮದೇ ಆದ ಲಾಬಿ ನಡೆಸಿದ್ದು ಗುಟ್ಟೇನಿಲ್ಲ.
ಈ ನಡುವೆ ಒಬ್ಬರು ಎರಡೂವರೆ ವರ್ಷಗಳ ಕಾಲ ಅಧಿಕಾರ ಅನುಭವಿಸಿದರೆ, ಮತ್ತೊಬ್ಬರು ಉಳಿದ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಬೇಕು ಎಂಬ ಸೂತ್ರವೂ ನಡೆದಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ಕದನ ಕಣ ಈ ಸಕ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ : ನೂತನ ಸಾರಥಿ ಯಾರಾಗ್ತಾರೆ ಗೊತ್ತೇ ? ಈ ಸಲ ಕದನ ಕಣ ಬಲು ಜೋರು !


