ದೆಹಲಿ :
ಮುಂದಿನ ಲೋಕಸಭಾ ಚುನಾವಣೆಗೆ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳು ರಣತಂತ್ರ ಹೆಣೆಯುತ್ತಿವೆ.
ಇದೀಗ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಿದರೂ ಅಧಿಕಾರಕ್ಕೆ ಮರಳುವಲ್ಲಿ ವಿಫಲವಾಗಲಿದೆ ಎಂದು ಟೈಮ್ಸ್ ನೌ- ಈಟಿಜಿ ರಿಸರ್ಚ್ ಸಮೀಕ್ಷೆ ವರದಿ ತಿಳಿಸಿದೆ.
ಸಮೀಕ್ಷೆ ಅನ್ವಯ ಏನ್ಡಿಎ ಮೈತ್ರಿಕೂಟ 307 ಸ್ಥಾನ ಪಡೆಯಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 175 ಸ್ಥಾನ ಹಾಗೂ ಇತರರು 61 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.
ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಮುನ್ನಡೆ ಗಳಿಸಲಿದೆ ಎಂದು ಸಮೀಕ್ಷೆ ನುಡಿದಿದೆ. ಲೋಕಸಭೆಗೆ ಚುನಾವಣೆ ನಡೆಯಲು ಕೇವಲ ಐದು ತಿಂಗಳು ಬಾಕಿ ಇದೆ. ಸತತ ಮೂರನೇ ಬಾರಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎಂದು ಸಮೀಕ್ಷೆ ಹೇಳಿದೆ.