ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಪಾಲಿನ ಅತ್ಯಂತ ಮಹತ್ವದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶಕ್ಕೆ ಈಗ ದಿನಗಣನೆ ನಡೆದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ್ದ 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ -1ರ ಫಲಿತಾಂಶ ಮೇ 2 ಅಥವಾ 3 ರಂದು ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಮಂಡಳಿಯ ಖಚಿತ ಮೂಲಗಳು ತಿಳಿಸಿವೆ.
ಮಾರ್ಚ್ 21ರಿಂದ ಏಪ್ರಿಲ್ 4 ರ ವರೆಗೆ ಪರೀಕ್ಷೆ ನಡೆದಿದ್ದವು. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದ್ದು, ಅಂಕಗಳ ಡಿಜಿಟಲೀಕರಣ ಸಹಿತ ಕೆಲವು ಸಣಪುಟ್ಟ ಕಾರ್ಯಗಳು ಉಳಿದುಕೊಂಡಿವೆ.