ನವದೆಹಲಿ: ಗೂಗಲ್ ಸರ್ಚ್ಗಳ ವಿಷಯಕ್ಕೆ ಬಂದಾಗಲೂ ಪಾಕಿಸ್ತಾನದಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. 2024 ರಲ್ಲಿ ಪಾಕಿಸ್ತಾನಿಗಳು ಅತಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಸಹ ಸೇರಿದ್ದಾರೆ.
ಗೂಗಲ್ನ ‘ಇಯರ್ ಇನ್ ಸರ್ಚ್ 2024’ ಪಾಕಿಸ್ತಾನಿಗಳ ಆಸಕ್ತಿ ನಿಜವಾಗಿಯೂ ಎಲ್ಲಿತ್ತು ಎಂಬುದನ್ನು ಗೂಗಲ್ ಸರ್ಚ್ ಒಳನೋಟವನ್ನು ನೀಡಿದೆ. ಅವರು ಬಿಗ್ ಬಾಸ್ ಸೀಸನ್ 17, ಮಿರ್ಜಾಪುರ ಸೀಸನ್ 3 ರ ಕಥಾವಸ್ತು ಮತ್ತು ನೆಟ್ಫ್ಲಿಕ್ಸ್ ಶೋ ಹೀರಾಮಂಡಿ ಬಗ್ಗೆ ತಿಳಿದುಕೊಳ್ಳಲು ಬಯಸಿ ಗೂಗಲ್ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ. ಬಾಲಿವುಡ್ ಚಲನಚಿತ್ರಗಳಾದ ಭೂಲ್ ಭುಲೈಯಾ 3, 12 ಫೇಲ್, ಅನಿಮಲ್, ಸ್ಟ್ರೀ 2 ಮತ್ತು ಡಂಕಿ ಚಲನಚಿತ್ರಗಳ ಬಗ್ಗೆಯೂ ಹೆಚ್ಚು ಸರ್ಚ್ ಮಾಡಿರುವುದು ಕಂಡುಬಂದಿದೆ.
ಈ ಎಲ್ಲದರ ನಡುವೆ, ಗೂಗಲ್ ಸರ್ಚ್ ಟ್ರೆಂಡ್ಗಳು ಹೇಳುವ ಒಂದು ಅಂಶವೆಂದರೆ ಉಪಖಂಡದ ಕ್ರಿಕೆಟ್ನ ಗೀಳು. ಐಸಿಸಿ ಟಿ 20 ವಿಶ್ವಕಪ್ ಬಗ್ಗೆ ಎರಡೂ ರಾಷ್ಟ್ರಗಳ ಜನರು ಸಮಾನ ಉತ್ಸಾಹದಿಂದ ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ.
ಯಾವುದೇ ಪಾಕಿಸ್ತಾನಿ ರಾಜಕಾರಣಿ ಅಥವಾ ಮನರಂಜನಾ ವ್ಯಕ್ತಿತ್ವವು ದೇಶದಲ್ಲಿ ಗೂಗಲ್ ಸರ್ಚ್ನ ಟಾಪ್ ಹುಡುಕಾಟಗಳಲ್ಲಿ ಸ್ಥಾನ ಪಡೆದಿಲ್ಲ.