ದೆಹಲಿ :
ಇಂಡಿಯಾ ಎಂದಿರುವ ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂಬ ಊಹಾಪೋಹಗಳ ನಡುವೆ ಈ ಹೆಸರು ಬದಲಾವಣೆಗೆ ಸುಮಾರು 14 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿಯಾಗಿದೆ.
ಗ್ರಾಮ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬದಲಾವಣೆ ಆಗಬೇಕಾಗಿರುವುದರಿಂದ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಖರ್ಚಾಗಬಹುದು ಎನ್ನಲಾಗಿದೆ. ಶ್ರೀಲಂಕಾ 1972ರಲ್ಲಿ ತನ್ನ ದೇಶದ ಸಿಲೋನ್ ಎಂದು ಹೆಸರನ್ನು ಬದಲಿಸಿತ್ತು. 2018ರಲ್ಲಿ ಸ್ವಿಜರ್ಲ್ಯಾಂಡ್ ತನ್ನ ನಗರಗಳ ಹೆಸರನ್ನು ಬದಲಾಯಿಸಿತು. ಇದಕ್ಕೆ ಆ ದೇಶದ ಜಿಡಿಪಿ 6 ವೆಚ್ಚ ತಗಲಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಮರುನಾಮಕರಣ ಮಾಡಲು 14,000 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂಬ ಅಂದಾಜಿದೆ.