ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅವರ ಕೈಗೆ ಸಂಪೂರ್ಣ ಹಣ ಸಿಗುವುದಿಲ್ಲ. ಬಹುಮಾನ ಮೊತ್ತಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ ಶೇ. 30 ರಷ್ಟು ಟ್ಯಾಕ್ಸ್ ಹಾಕುತ್ತದೆ. ಹೀಗಾಗಿ ಹನುಮಂತ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅದರಲ್ಲಿ ಕೈಗೆ ಸಿಗುವುದು 35 ಲಕ್ಷ ರೂಪಾಯಿ ಮಾತ್ರ. ಇನ್ನುಳಿದ 15 ಲಕ್ಷ ರೂ. ಟ್ಯಾಕ್ಸ್ ರೂಪದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸ ಸೇರಲಿದೆ.