ಬೆಂಗಳೂರು :
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಎಸ್ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಈಗ ಎರಡನೇ ಸ್ಥಾನದಲ್ಲಿದೆ ಎಂದು ಖುಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟ್ ಮಾಡಿದ್ದಾರೆ.
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಈಗ ಗುಜರಾತ್ ನ್ನು ಹಿಂದಿಕ್ಕಿದ್ದು, ನಮ್ಮ ಮುಂದಿರುವ ಏಕೈಕ ರಾಜ್ಯ ಮಹಾರಾಷ್ಟ್ರ.
ನಮ್ಮ ವಿತರಕರ ಉತ್ತಮ ಅನುಸರಣೆ ಮತ್ತು ಅಧಿಕಾರಿಗಳ ಹೆಚ್ಚಿದ ಜಾಗರೂಕತೆಯೇ ಇದಕ್ಕೆ ಕಾರಣ. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ಸುಧಾರಣೆಗಳ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ
ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯೂ ಸಾಧನೆಯತ್ತ
ಬೆಳಗಾವಿ ವಿಭಾಗವು ಜಿ.ಎಸ್.ಟಿ ಸಂಗ್ರಹದಲ್ಲಿ ಸಾಲಿನಲ್ಲಿ ಭಾರಿ ಏರಿಕೆ ಕಂಡಿದ್ದು, ಶೀಘ್ರದಲ್ಲೇ ಇನ್ನೂ ಹೆಚ್ಚಿನ ಸಾಧನೆಗಾಗಿ ರೂಪುರೇಷೆ ಮಾಡಲಾಗಿದೆ. ಸದ್ಯದ ಮಾಹಿತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಬೆಳಗಾವಿ ವಿಭಾಗದ ಜಾರಿ ಜಂಟಿ ಆಯುಕ್ತ ಆರ್.ಡಿ.ಮೇಘಣ್ಣವರ ಹಾಗೂ ಡಿಸಿ ಶ್ರೀಶೈಲ ಬಿದರಕುಂದಿ ‘ಜನ ಜೀವಾಳ’ಕ್ಕೆ ತಿಳಿಸಿದ್ದಾರೆ.