ಬೆಳಗಾವಿ:
ದೀಪಾವಳಿ ಹಬ್ಬದ ಪ್ರಯುಕ್ತ
ಬೆಂಗಳೂರು,ಮುಂಬಯಿ, ಪುಣೆ ಮತ್ತು ಪಣಜಿ ನಗರಗಳಿಂದ ಬೆಳಗಾವಿಗೆ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ಮಾಡುತ್ತಿದೆ. ನ.11 ರಿಂದ ನ.14ವರೆಗೆ ಬೆಂಗಳೂರು, ಮುಂಬಯಿ, ಪುಣೆ ಹಾಗೂ ಪಣಜಿಗಳಿಂದ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ನ.10 ರಂದು ಬೆಂಗಳೂರು ಕೆಂಪೆಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ಹೆಚ್ಚಿನ ಬಸ್ ಸಂಚಾರ ಮತ್ತು ಹಬ್ಬದ ನಂತರ ಮರಳಿ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕ್ಕೆ ನ.14 ರಂದು ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಿವೆ.
ಮಹಾರಾಷ್ಟ್ರದ ಪುಣೆ, ಮುಂಬಯಿ, ಕೊಲ್ಲಾಪುರಗಳಿಂದ ಬೆಳಗಾವಿ ಕಡೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ನ.23 ರವರೆಗೆ ಪ್ರಯಾಣಿಕರ ದಟ್ಟಣೆಗೆ ಅನುಸರಿಸಿ ವಿಶೇಷ ಸಾರಿಗೆ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಸಾರಿಗೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕೋಡಿ: ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ,
ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಗೆ ನ.11 ರಿಂದ ನ.14 ವರೆಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಮತ್ತು ಗೋಕಾಕ ರಾಯಬಾಗ ಘಟಕಗಳಿಂದ ಕೊಲ್ಲಾಪುರ, ಪುಣೆ, ಮುಂಬಯಿ ಹಾಗೂ ಇತರೇ ಅಂತಾರಾಜ್ಯ ಮಾರ್ಗಗಳಿಗೆ ನ.10 ರಿಂದ ನ.24 ರವರೆಗೆ ಹೆಚ್ಚುವರಿ ಬಸ್ ಸೌಲಭ್ಯ ಹಾಗೂ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಂದ ನ.10 ರಿಂದ ನ.11 ರವರೆಗೆ ಬೆಂಗಳೂರಿನಿಂದ ವಿಶೇಷ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು. ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಂದ ನ.14 ರಿಂದ ನ.15 ರವರೆಗೆ ಬೆಂಗಳೂರಿಗೆ ವಿಶೇಷ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ವಿಭಾಗದ ನಿಪ್ಪಾಣಿ ಘಟಕದಿಂದ ನಿಪ್ಪಾಣಿ-ಇಚಲಕರಂಜಿ, ನಿಪ್ಪಾಣಿ-ಕೋಲ್ಲಾಪುರ ಚಿಕ್ಕೋಡಿ ಘಟಕದಿಂದ ಚಿಕ್ಕೋಡಿ-ಇಚಲಕರಂಜಿ, ಚಿಕ್ಕೋಡಿ-ಮಿರಜ ಸಂಕೇಶ್ವರ ಘಟಕದಿಂದ ಸಂಕೇಶ್ವರ ಗಡಹಿಂಗ್ಲಜ. ಸಂಕೇಶ್ವರ-ಕೊಲ್ಲಾಪುರ ಮತ್ತು ಅಥಣಿ ಘಟಕದಿಂದ ಅಥಣಿ-ಮಿರಜ ಮಾರ್ಗಗಳಲ್ಲಿನ.14 ರಿಂದ ನ.15 ವರಗೆ ಹೆಚ್ಚುವರಿ ವಿಶೇಷ ಸಾರಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.