ಬೆಳಗಾವಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ನಿಮಿತ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮತ್ತು ಎಲ್ಲ ವಯೋಮಿತ ಹಿರಿಯ ನಾಗರಿಕರಿಗೆ ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಬುಧವಾರ 8 ಏಪ್ರಿಲ್ 2026 ರಂದು ಮುಂಜಾನೆ 10.00 ಗಂಟೆಗೆ ಕೆಎಲ್ಇ ಸಂಸ್ಥೆಯ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲಿ ಆಯೋಜಿಸಿದೆ.
ಪ್ರಾಥಮಿಕ ವಿಭಾಗಕ್ಕೆ ‘ಬಾಲಕ ಬಸವಣ್ಣ’, ಮಾಧ್ಯಮಿಕ ವಿಭಾಗಕ್ಕೆ ‘ವಚನಗಳಲ್ಲಿ ಸರ್ವಸಮಾನತೆ’, ಪದವಿಪೂರ್ವ ವಿಭಾಗಕ್ಕೆ ‘ಸಮಾಜಕ್ಕೆ ಶರಣರ ಕೊಡುಗೆ’, ಪದವಿ ಹಾಗೂ ಸ್ನಾತಕೋತ್ತರ ವಿಭಾಗಕ್ಕೆ ‘ವಚನಗಳಲ್ಲಿ ಪ್ರಕೃತಿದರ್ಶನ’ ಎಲ್ಲ ವಯೋಮಾನದವರಿಗೆ ‘ಶರಣರ ದೃಷ್ಟಿಯಲ್ಲಿ ದೇವರು’ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಬಂಧವು ಒಂದು ಗಂಟೆಯದಾಗಿದ್ದು, 4 ಪುಟ ಮೀರದಂತೆ ರಚಿಸಬೇಕು.
ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ಉದ್ಘಾಟನಾ ಸಮಾರಂಭದಲ್ಲಿ ವಿತರಿಸಲಾಗುವುದು. ಆಸಕ್ತ ಸ್ಪರ್ಧಾಳುಗಳು 7 ಏಪ್ರಿಲ್ 2025 ರ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತ ಭವನದಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಕಾರ್ಯಾಲಯದ ಪ್ರವೀಣ ತವಕರಿ ಮೊ.ನಂ. 9164345208 ಇವರನ್ನು ಸಂಪರ್ಕಿಸಬೇಕೆಂದು ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಜಯಂತಿ ಉತ್ಸವದ ಅಧ್ಯಕ್ಷ ಬಾಲಚಂದ್ರ ಬಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


