ಶಿವಮೊಗ್ಗ :
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ) ಶಿವಮೊಗ್ಗ ಮತ್ತು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ಸಹಯೋಗದಲ್ಲಿ ದಿನಾಂಕ 11.02.2023ರಿಂದ 12.02.2023ರ ವರೆಗೆ ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆಚಾಪುರದ ಶ್ರೀ ಮುರುಘಾ ಮಠದಲ್ಲಿ ಡಾ ಮಲ್ಲಿಕಾರ್ಜುನ ಮುರುಘಾಜೇಂದ್ರ ಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಆರಂಭಿಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ರವಿರಾಜ್ ಸಾಗರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಸದ ಬಿ ವೈ. ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಚ. ನ. ಅಶೋಕ, ರಾಜ್ಯಾಧ್ಯಕ್ಷರು, ಮಕ್ಕಳ ಸಾಹಿತ್ಯ ಪರಿಷತ್, ಬೆಂಗಳೂರು, ಭಾರತೀ ಶೆಟ್ಟರ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಬಿ ಕೃಷ್ಣಪ್ಪ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಿವಮೊಗ್ಗ, ಪರಮೇಶ್ವರಪ್ಪ ಎಚ್ ಎನ್, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ , ಸುರೇಶ ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ, ಮುಂತಾದವರು ಆಗಮಿಸುವರು.
ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪ್ರಶಸ್ತಿಯನ್ನು ಕೆ ಎಸ್ ಮಂಜುನಾಥ್ ಅವರಿಗೆ, ಮಕ್ಕಳ ಮಂದಾರ ಪ್ರಶಸ್ತಿಯನ್ನು ಶವೈ ಜಿ ಭಗವತಿ ಅವರಿಗೆ, ನೇಕಾರ
ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.