ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ನಿಮಿತ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮತ್ತು ಎಲ್ಲ ವಯೋಮಿತ ಹಿರಿಯ ನಾಗರಿಕರಿಗೆ ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಶನಿವಾರ 5 ಎಪ್ರಿಲ್ 2025 ರಂದು ಮುಂಜಾನೆ 10.00 ಗಂಟೆಗೆ ಕೆಎಲ್ಇ ಸಂಸ್ಥೆಯ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲಿ ಆಯೋಜಿಸಿದೆ.
ಪ್ರಾಥಮಿಕ ವಿಭಾಗಕ್ಕೆ ‘ಬಸವ ತಂದೆಗೊಂದು ಪತ್ರ’, ಮಾಧ್ಯಮಿಕ ವಿಭಾಗಕ್ಕೆ ‘ಬೆಳಗಾವಿ ಜಿಲ್ಲೆಯ ಶರಣ ಕ್ಷೇತ್ರಗಳು’, ಪದವಿಪೂರ್ವ ವಿಭಾಗಕ್ಕೆ ‘ಮೂಢನಂಬಿಕೆಗಳ ನಿರ್ಮೂಲನೆಗೆ ಶರಣರ ಕೊಡುಗೆ’, ಪದವಿ ಹಾಗೂ ಸ್ನಾತಕೋತ್ತರ ವಿಭಾಗಕ್ಕೆ ‘ವಚನಗಳಲ್ಲಿ ದೇವರ ಪರಿಕಲ್ಪನೆ’ ಎಲ್ಲ ವಯೋಮಾನದವರಿಗೆ ‘ಶರಣರ ದೃಷ್ಟಿಯಲ್ಲಿ ಸತ್ಸಂಗದ ಪರಿಕಲ್ಪನೆ’ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ಉದ್ಘಾಟನಾ ಸಮಾರಂಭ 27 ಎಪ್ರಿಲ್ 2025 ರಂದು ವಿತರಿಸಲಾಗುವುದು. ಆಸಕ್ತ ಸ್ಪರ್ಧಾಳುಗಳು 1 ಎಪ್ರಿಲ್ 2025 ರ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತ ಭವನದಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಕಾರ್ಯಾಲಯದ ಪ್ರವೀಣ ತವಕರಿ ಮೊ.ನಂ. 9164345208 ಹಾಗೂ ಜಯಂತಿ ಉತ್ಸವದ ಉಪಾಧ್ಯಕ್ಷರಾದ ಶಂಕರ ಪಟ್ಟೇದ ಮೊ.ನಂ.9980208973 ಇವರನ್ನು ಸಂಪರ್ಕಿಸಬೇಕೆAದು ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಹಾಗೂ ಜಯಂತಿ ಉತ್ಸವದ ಅಧ್ಯಕ್ಷ ಬಾಲಚಂದ್ರ ಬಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..