ಕಿತ್ತೂರು ಉತ್ಸವ-2022 ರ ಆಮಂತ್ರಣ ಪತ್ರಿಕೆ ಇನ್ನೂ ಅಂತಿಮಗೊಂಡಿರುವುದಿಲ್ಲ.
ಆದಾಗ್ಯೂ ಸಾಮಾಜಿಕ ಜಾಲತಾಣ ಸೇರಿದಂತೆ ಕೆಲವೆಡೆ ತಪ್ಪು ಮಾಹಿತಿಯನ್ನು ಹರಡುವ ಮೂಲಕ ಗೊಂದಲವನ್ನು ಮೂಡಿಸಲಾಗುತ್ತಿದೆ.
ಉತ್ಸವದ ಆಮಂತ್ರಣ ಪತ್ರಿಕೆ ಮುದ್ರಣಗೊಂಡ ತಕ್ಷಣವೇ ಅಧಿಕೃತವಾಗಿ ಎಲ್ಲರಿಗೂ ಕಳಿಸಲಾಗುವುದು.
ಆದ್ದರಿಂದ ಯಾವುದೇ ರೀತಿಯ ಗೊಂದಲ ಅಥವಾ ಊಹಾಪೋಹಗಳಿಗೆ ಆಸ್ಪದ ನೀಡಬಾರದು ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಗಾವಿ :
ಜಿಲ್ಲಾಡಳಿತದಿಂದ ಕಿತ್ತೂರ ಉತ್ಸವವನ್ನು ವಿಜೃಂಭಣೆಯಿಂದ ಮೂರು ದಿನಗಳ ಕಾಲ ಆಚರಿಸಲಿರುವ ಕಾರಣ ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳವ ಅವಶ್ಯಕತೆ ಇರುವುದರಿಂದ ಅಕ್ಟೊಬರ್ 23, ಬೆಳಿಗ್ಗೆ 6ಗಂಟೆಯಿಂದ ಅಕ್ಟೊಬರ್ 25, ಮಧ್ಯರಾತ್ರಿ 12 ಗಂಟೆವರೆಗೆ ಕಿತ್ತೂರು ಪಟ್ಟಣದಲ್ಲಿರುವ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ಬಂದ್ ಮಾಡಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ಅಬಕಾರಿ ಉಪ ಆಯುಕ್ತರು, ಬೆಳಗಾವಿ ಮತ್ತು ಅಬಕಾರಿ ಉಪ ಅಧೀಕ್ಷಕರು ವರು ಉತ್ಸವದ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಕರ್ನಾಟಕ ಅಬಕಾರಿ ಕಾಯ್ದೆಯಡಿ ಇಬ್ಬ ವ್ಯಕ್ತಿ ಹೊಂದಬೇಕಾದ ಮದ್ಯ ಸಂಗ್ರಹಣೆ ಹೊರತು ಪಡಿಸಿ ಹೆಚ್ಚಿನ ಸಂಗ್ರಹಣೆ ಇರದಂತೆ ಹಾಗೂ ಲೈಸನ್ಸ್ ಇಲ್ಲದ ಆವರಣಗಳಲ್ಲಿ ಸಂಗ್ರಹಣೆ ಇಡದಂತೆ ಸೂಕ್ತ ಕ್ರಮ ಜರುಗಿರಬೇಕು.
ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರು ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಶಿಕ್ಷೆಗೆ ಒಳಪಡುವರು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ.