ಅಥಣಿ :ಸತ್ಯಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ಸುಮಾರು 1000 ಕ್ಕೂ ಹೆಚ್ಚು ಹಿಟ್ಟಿನ ಗಿರಣಿಯನ್ನು ನೀಡಲಾಗಿದೆ.
ಯುವ ಬಿಜೆಪಿ ನೇತಾರ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಅಥಣಿ ತಾಲ್ಲೂಕಿನಾದ್ಯಂತ ಮನೆಮನೆಗೆ ಹಿಟ್ಟಿನ ಗಿರಣಿಯನ್ನು ಶೇ. 50 ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಇದರಿಂದ
ಜನರಿಗೆ ಅನುಕೂಲವಾಗಿದೆ.
ಈ ಹಿಂದೆ ಕರೊನಾ ಸಂದರ್ಭದಲ್ಲಿ ಅಥಣಿ ಮತಕ್ಷೇತ್ರದ ಲಕ್ಷಾಂತರ ಜನರಿಗೆ ಸುಮಾರು 3 ಲಕ್ಷಕ್ಕೂ ಅಧಿಕ ಬೃಹತ್ ಕಿಟ್ ಗಳನ್ನು ವಿತರಿಸುವ ಮೂಲಕ ಜಿಲ್ಲೆಯಲ್ಲಿ ಯಾರೂ ಮಾಡದ ಸಾಧನೆಯನ್ನು ಸತ್ಯಸಂಗಮ ಪ್ರತಿಷ್ಠಾನ ಮಾಡಿತ್ತು.
ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಜನರ ಅತ್ಯಗತ್ಯದ ಈ ಕನಸು ಈಗ ಸಾಕಾರಗೊಂಡಿದೆ.