ಅಮೆಜಾನ್ ಕಾಡನ್ನು ಅನ್ವೇಷಿಸುವ ಸಂಶೋಧಕರ ತಂಡವು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಈ ಅನ್ವೇಷಕರ ತಂಡವು ದಕ್ಷಿಣ ಅಮೆರಿಕದ ಈಕ್ವೆಡಾರ್ನ ದಟ್ಟವಾದ ಮಳೆಕಾಡಿನಲ್ಲಿ ಹೊಸ ಜಾತಿಯ ದೈತ್ಯ ಅನಕೊಂಡ ಹಾವನ್ನು ಪತ್ತೆ ಮಾಡಿದ್ದಾರೆ.
ನ್ಯಾಷನಲ್ ಜಿಯಾಗ್ರಫಿಕ್ ಅನ್ವೇಷಣೆ ವೇಳೆ ವಿಜ್ಞಾನಿಗಳು ಈ ಹೊಸ ಅನಕೊಂಡ ಜಾತಿ ಹಾವನ್ನು ಪತ್ತೆ ಮಾಡಿದ್ದಾರೆ. ಪ್ರೊಫೆಸರ್ ಬ್ರಿಯಾನ್ ಫ್ರೈ ನೇತೃತ್ವದ ತಂಡವು ಬಮೆನೊ ಪ್ರದೇಶದಲ್ಲಿ ಈ ದೈತ್ಯ ಹಾವನ್ನು ಪತ್ತೆ ಮಾಡಿದ್ದು, ಈ ಪ್ರದೇಶವು ಈಕ್ವೆಡಾರ್ನ ಬೈಹುವೇರಿ ವೌರಾನಿ ಪ್ರಾಂತ್ಯದಲ್ಲಿದೆ, ಇದು ಅಪರೂಪವಾಗಿ ಪರಿಶೋಧಿಸಲ್ಪಟ್ಟ ದೂರದ ಮಳೆ ಕಾಡು.
ಉತ್ತರದ ಹಸಿರು ಅನಕೊಂಡ (ಯುನೆಕ್ಟೆಸ್ ಅಕಾಯಿಮಾ) ಎಂದು ಹೆಸರಿಸಲಾದ ಈ ದೈತ್ಯ ಹಾವು 20 ಅಡಿ ಉದ್ದ ಮೀರಿ ಬೆಳೆಯಬಹುದು. ಇದು ಉದ್ದದಲ್ಲಿ ಅನಕೊಂಡ ಹಾವುಗಳ ಹಿಂದಿನ ದಾಖಲೆಗಳನ್ನು ಮುರಿದಿದೆ. ವಿಲ್ ಸ್ಮಿತ್ ಜೊತೆ ಪೋಲ್ ಟು ಪೋಲ್ ಚಿತ್ರೀಕರಣ ಮಾಡುವಾಗ ಈ ಹಾವನ್ನು ಪತ್ತೆ ಮಾಡಲಾಗಿದೆ.
ದೈತ್ಯ ಹಾವನ್ನು ಟ್ರ್ಯಾಕ್ ಮಾಡಲಾಯಿತು…
10 ದಿನಗಳ ಕಾಲ, ವಿಜ್ಞಾನಿಗಳು ಮತ್ತು ವೌರಾನಿ ಬೇಟೆಗಾರರು ಕಾಡಿನಲ್ಲಿ ಹುಡುಕಿದರು. ಸ್ಥಳೀಯ ಸಮುದಾಯವು ಈ ಅನಕೊಂಡ ಜಾತಿ ಹಾವುಗಳು ವಿಶ್ವದ ಅತಿ ದೊಡ್ಡ ಅನಕೊಂಡ ಹಾವುಗಳು ಎಂದು ನಂಬುತ್ತಾರೆ. ತಂಡವು ದೋಣಿಯ ಮೂಲಕ ನದಿ ಪ್ರದೇಶದಲ್ಲಿ ಈ ಹಾವನ್ನು ಹುಡುಕಿತು.
ಅವರು 20.7 ಅಡಿ ಉದ್ದದ ಹಾವನ್ನು ಪತ್ತೆ ಮಾಡಿದರು. ಕೆಲವು ವೌರಾನಿಗಳು ಈ ಪ್ರದೇಶದಲ್ಲಿ ಅನಕೊಂಡಗಳು 24 ಅಡಿಗಳಿಗಿಂತ ಹೆಚ್ಚು ಉದ್ದ ಬೆಳೆಯುತ್ತವೆ ಎಂದು ಹೇಳಿಕೊಳ್ಳುತ್ತಾರೆ. ಇದು ನಿಜವಾಗಿದ್ದರೆ, ಇದುವರೆಗೆ ದಾಖಲಾದ ಅತಿ ದೊಡ್ಡ ಹಾವುಗಳಾಗುತ್ತವೆ.
ಈ ಹಾವನ್ನು ಪತ್ತೆಹಚ್ಚಲು ವಿಜ್ಞಾನಿಗಳು ದಟ್ಟವಾದ ಮಳೆಕಾಡಿನಲ್ಲಿ ಅಲೆದಾಡಿದರು. ಅನಕೊಂಡಗಳು ಆಳವಿಲ್ಲದ ನೀರಿನಲ್ಲಿ ಕಂಡುಬರುತ್ತವೆ ಹಾಗೂ ಬೇಟೆಗಾಗಿ ಕಾಯುತ್ತಿರುತ್ತವೆ. ತಜ್ಞರು ಹಲವಾರು ಮಾದರಿಗಳನ್ನು ಅಧ್ಯಯನ ಮಾಡಿದರು, ಈಗ ಪತ್ತೆಯಾದ ಹಾವು ಅನಕೊಂಡ ಜಾತಿಯ ವಿಶಿಷ್ಟತೆಯನ್ನು ದೃಢೀಕರಿಸುತ್ತದೆ. ಈ ದೈತ್ಯ ಹಾವಿನ ಪತ್ತೆಯಿಂದ ವಿಶಾಲವಾದ ಅಮೆಜಾನ್ ಮಾಡಿನ ಪ್ರದೇಶಗಳಲ್ಲಿ ಇನ್ನೂ ದೊಡ್ಡ ಅನಕೊಂಡಗಳು ಇರಬಹುದೇ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಕಾಡು ಇನ್ನೂ ಅನೇಕ ರಹಸ್ಯಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳುತ್ತಾರೆ.