ಬೆಳಗಾವಿ: ಆಧುನಿಕ ಯುಗದಲ್ಲಿ ಬಾಂಧವ್ಯಗಳು ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾಜಿಕ ಕರ್ತವ್ಯ ನಿರ್ವಹಿಸಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿ.ಜಿ.ಚಿಟ್ನಿಸ್ ಪ್ರೌಢಶಾಲೆಯಲ್ಲಿ ನಡೆದ ಅಲೈನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಮತ್ತು ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ನಗುವುದನ್ನೇ ಮರೆಯಲಾಗಿದೆ. ಮನುಕುಲದ ಬಾಂಧವ್ಯಗಳು ಕಡಿಮೆಯಾಗುತ್ತಿವೆ. ಪರಸ್ಪರ ಸ್ನೇಹ ಕಡಿಮೆಯಾಗಿ ವಿಮುಖತೆ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಒಡಹುಟ್ಟಿದವರ ಜೊತೆಗೆ ಮಾತುಕತೆ ನಡೆಸಿದರೆ ಜನ ತಪ್ಪು ತಿಳಿಯುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನಾನು ಮಾಜಿ ಶಾಸಕ.ನಾನು ನಕ್ಕರೆ ಈತ ಏಕೆ ನಗುತ್ತಿರುತ್ತಾನೆ, ಅತ್ತರೆ ಈತನು ಏಕೆ ಅಳುತ್ತಿರುತ್ತಾನೆ, ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಬೇರೆ ಉದ್ಯೋಗ ಇರುವುದಿಲ್ಲ ಎನ್ನುತ್ತಾರೆ. ಆದರೆ ಸಭೆ ಸಮಾರಂಭದಲ್ಲಿ ಪಾಲ್ಗೊಂಡರೆ ಅದಕ್ಕೂ ತಮಾಷೆ ಮಾಡುತ್ತಾರೆ. ಮಾತನಾಡಿದರೆ ಹೆಚ್ಚಿಗೆ ಮಾತನಾಡುತ್ತಾರೆ ಎನ್ನುತ್ತಾರೆ. ಭಾಷಣ ಮಾಡುವಾಗ ತಪ್ಪಿ ಯಾರದ್ದಾದರೂ ಹೆಸರು ಹೇಳಿದರೆ ಅದನ್ನು ತಪ್ಪು ತಿಳಿವಳಿಕೆ ಮಾಡಿಕೊಳ್ಳುತ್ತಾರೆ. ಬಹಳ ಕೆಲಸದ ಒತ್ತಡದಲ್ಲಿ ಕಾರ್ಯಕ್ರಮಕ್ಕೆ ಬರಲು ಅನಾನುಕೂಲತೆ ಇದ್ದರೆ ಈತನಿಗೆ ಬಹಳ ಸೊಕ್ಕು ಎನ್ನುತ್ತಾರೆ. ಎಲ್ಲಾ ಕಾರ್ಯಕ್ರಮಗಳನ್ನು ಒಪ್ಪಿದರೆ ಈತನಿಗೆ ಬೇರೆ ಉದ್ಯೋಗವಿಲ್ಲ ಎನ್ನುತ್ತಾರೆ. ಜಗತ್ತಿನಲ್ಲಿ ಸಂಶಯ ಈಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿ, ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಸೇವಾ ಕರ್ತವ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.
ಬೆಳಗಾವಿ ಅಲೈನ್ಸ್ ಕ್ಲಬ್ ಸೆಂಟ್ರಲ್ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಧನ್ಯ ಕುಮಾರ್ ಸರಳ ಸ್ವಭಾವದ ವರು. ಆರ್ ಎಸ್ ಎಸ್ ಮೂಲದವರು. ಶಿಸ್ತು ಪರಿಪಾಲನೆ ಮಾಡುವವರು. ಶಿಸ್ತಿನ ವ್ಯಕ್ತಿಯಾಗಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲೈನ್ಸ್ ಕ್ಲಬ್ ಅಂತರಾಷ್ಟ್ರೀಯ ಚೇರ್ ಪರ್ಸನ್, ಜಿಲ್ಲಾ ಸ್ಥಾಪಕ ಜಿಲ್ಲಾ ಗವರ್ನರ್ ದಿನಕರ ಶೆಟ್ಟಿ ಅವರು ಪ್ರಮಾಣವಚನ ಬೋಧಿಸಿದರು.
ಡಾ. ಸತೀಶ ಚವಲಗೇರಿ ಅವರನ್ನು ಸನ್ಮಾನಿಸಲಾಯಿತು. ಅಲೈನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಕೆ.ಎಲ್.ಕುಂದರಗಿ, ಜಿಲ್ಲಾ ಚೇರ್ಮನ್ ರವೀಂದ್ರ ತೋಟಿಗೇರ, ನ್ಯಾಯವಾದಿ, ಜ್ಞಾನದೀಪ ಸಂಸ್ಥೆಯ ಅಧ್ಯಕ್ಷ ಚಂದ್ರಹಾಸ ಅಣ್ವೇಕರ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಧನ್ಯಕುಮಾರ ಪಾಟೀಲ, ಉಪಾಧ್ಯಕ್ಷರಾಗಿ ಶಂಕರ ಕಾಂಬಳೆ, ಪ್ರದೀಪ ಹುಕ್ಕೇರಿಮಠ, ವೈಭವ ಧೋಂಗಡಿ, ಕಾರ್ಯದರ್ಶಿಯಾಗಿ ಪರಾಗ್ ಅಥಲ್ಯೆ , ಖಜಾಂಚಿಯಾಗಿ ಸಂದೀಪ್ ಪಾಟೀಲ ಮತ್ತು ಸದಸ್ಯರಾಗಿ ಹದಿನೈದು ಜನ ಪ್ರಮಾಣವಚನ ಸ್ವೀಕರಿಸಿದರು.
ಅಕ್ಷತಾ ಕುಲಕರ್ಣಿ ನಿರೂಪಿಸಿದರು. ಡಾ.ನವೀನಾ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.