ಬೆಳಗಾವಿ :
ವನ್ಯಜೀವಿಗಳು ನಮ್ಮ. ಪರಿಸರದ ಶಕ್ತಿ. ಅವುಗಳ ನಾಶ ಪರಿಸರದ ನಾಶ. ಅವುಗಳಿದ್ದರೆ ಮಾತ್ರ ಕಾಡು, ಅರಣ್ಯ . ಇವುಗಳಿದ್ದರೆ ನಮಗೆ ಉಸಿರು. ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಬೆಳಗಾವಿ ಡಿ .ಎಫ್.ಓ. ಹರ್ಷ ಬಾನು ಹೇಳಿದರು.
ಶನಿವಾರ ರಾಣಿ ಚೆನ್ನಮ್ಮ ಮ್ರುಗಾಲಯದಲ್ಲಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಮತ್ತು ಅರಣ್ಯ ಇಲಾಖೆ ಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವನ್ಯಜೀವಿ ದಿನಾಚರಣೆ ಮತ್ತು ಬೆಳಗಾವಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಯ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುಂಡ ದ. ಸಸಿಗೆ ನೀರುಣಿಸಿ ಉದ್ಘಾಟಿಸಿ ವೇದಿಕೆ ಉದ್ದೇಶಿಸಿ ಮಾತನಾಡಿದರು. ಈ ಜ್ಯೂ ಈಗ ಎಲ್ಲರನ್ನೂ ಆಕರ್ಶಿಸುತ್ತಿದ್ದು ಖುಷಿ ತಂದಿದೆ . ಪ್ರಾಣಿ ದತ್ತು ತೆಗೆದುಕೊಳ್ಳಲು ದಾನಿಗಳು ಮುಂದಾಗಬೇಕು ಎಂದರಲ್ಲದೆ, ಬರುವ ದಿನಮಾನಗಳಲ್ಲಿ ಹೆಚ್ಚೆಚ್ಚು ಕಾಡುಪ್ರಾಣಿಗಳನ್ನು ಸೇರಿಸಿ ಉನ್ನತ ದರ್ಜೆಗೇರಿಸುವದಾಗಿ ಹೇಳಿದರು.
ಬೆಳಗಾವಿ ಮಾಜಿ ಮೇಯರ್ ಎನ್.ಬಿ.ನಿರ್ವಾಣಿ ಮಾತನಾಡಿ ಹುಲಿ,ಸಿಂಹ ಸೇರಿದಂತೆ ಇತರ ಎಲ್ಲ ಕಾಡು ಪ್ರಾಣಿಗಳನ್ನು ನೋಡುವ ಅವಕಾಶ ಇಲ್ಲಿದೆ. ಇದರ ಸದುಪಯೋಗಕ್ಕೆ ಮುಂದಾಗುವಂತೆ ಕರೆ ನೀಡಿದರಲ್ಲದೆ ನಾವಿಡುವ ಕಾಡಿನಲ್ಲಿನ ಹೆಜ್ಜೆಗಳಿಂದಾಗಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದ್ದು ಇದು ದುರದೃಷ್ಟಕರ ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎನ್.ಮಿಸಾಳೆ ಅರಣ್ಯದಲ್ಲಿನ ಮಾನವನ ದುಷ್ಕ್ರತ್ಯ ಮತ್ತು ಕಾಡು ಪ್ರಾಣಿಗಳ ಮೇಲಿನ ದಾಳಿ ಕುರಿತು ಸವಿಸ್ತಾರವಾಗಿ ಹೇಳಿದರಲ್ಲದೆ ವನ್ಯಜೀವಿ, ಪರಿಸರಗಳ ಮೇಲಿನ ಮಾನವನ ಕ್ರೂರ ನರ್ತನ ನಿಲ್ಲಬೇಕೆಂದರು.
ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸ್ವಾಗತಿಸಿ ನಿರೂಪಿಸಿದರು.
ಖಜಾಂಚಿ ಜಗದೀಶ ಮಠದ, ನಿರ್ದೇಶಕ ವಿಲಾಸ ಕೆರೂರ,
ಎಸ್.ಜಿ.ಕಲ್ಯಾಣಿ, ಡಿ. ಎಮ್. ಟೊಣ್ಣೆ, ಆರ್.ಎಫ್.ಓ. ಕೆಂಪಣ್ಣ ವನ್ನೂರಿ , ಬೀಟ ಫಾರೆಸ್ಟ್ ರ ಅಭಿನಂದನ ಮಗದುಮ್, ಹುಕ್ಕೇರಿ ಆರ್.ಎಫ್.ಓ. ಪ್ರಸನ್ನ ಬೆಲ್ಲದ, ಡಾ. ನಾಗೇಶ ಹುಯಿಲಗೋಳ, ಪರಶುರಾಮ ಗಿರೆಣ್ಣವರ, ಯಲ್ಲಪ್ಪ ಗಿರೆಣ್ಣವರ ಸೇರಿದಂತೆ ಪ್ರವಾಸಿಗರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆಯ ಖಜಾಂಚಿ ಜಗದೀಶ ಮಠದ ವಂದಿಸಿದರು.