ಬೆಳಗಾವಿ : ಬಾಳೇಕುಂದ್ರಿ ಬಿ ಕೆ ಗ್ರಾಮದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರದಿಂದ 1.87 ಕೋಟಿ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ದತ್ತ ಕಾಲೋನಿ, ಪಂತ ನಗರ, ಹನುಮಾನ ನಗರ, ಅವಧೂತ ನಗರ ಹಾಗೂ ಲಕ್ಷ್ಮೀ ಕಾಲೋನಿಯ ರಸ್ತೆಗಳು ಈ ನಿಧಿಯಲ್ಲಿ ಅಭಿವೃದ್ಧಿಯಾಗಲಿವೆ. ಗ್ರಾಮಸ್ಥರ ಬೇಡಿಕೆಯಂತೆ ತೀವ್ರ ಪ್ರಯತ್ನ ಮಾಡಿ ಕೆಲಸ ಮಂಜೂರು ಮಾಡಿಸಿಕೊಂಡು ಬರುವಲ್ಲಿ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಸಮಯ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮೈನೂದ್ದಿನ ಅಗಸಿಮನಿ, ಗುಲಾಬಿ ಕೋಲಕಾರ, ಅಪ್ಸರ್ ಜಮಾದಾರ, ಬಸಪ್ಪ, ಕಲ್ಲಪ್ಪ ಕಲಕಾಂಬ್ಕರ್, ಜಮೀಲ್ ಕಾಜಿ, ಚಂದು ಪಾಟೀಲ, ಅಶೋಕ ಪತ್ತಾರ, ಪ್ರಲ್ಹಾದ ಪಾಟೀಲ, ಸಾಗರ ಪಾಟೀಲ, ಅಲ್ತಾಫ್ ಯಾದವಾಡ, ಕಲ್ಲಪ್ಪ ಹಿರೋಜಿ, ಪಾರ್ವತಿ ತಳವಾರ, ಬಿಬಿ ಹನೀಫಾ, ನಿಂಗನಗೌಡ ಪಾಟೀಲ, ಬಿ ಬಿ ಸುಂಕದ, ಗೀತಾ ಗುಜನಟ್ಟಿ, ಗೌಸ್ ಸುತಾರ, ಎಚ್ ಕೆ ಬಾಗವಾನ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಮುತಗಾ ರಸ್ತೆ:
ಮುತಗಾ ಗ್ರಾಮದ ವೆಂಕಟೇಶ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸng ಸರ್ಕಾರದಿಂದ 24 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿರುವ ಲಕ್ಷ್ಮೀ ಹೆಬ್ಬಾಳಕರ್, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು, ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಗಜಾನನ ಕಣಬರ್ಕರ್, ಪಿಂಟು ಮಲ್ಲವ್ವಗೋಳ, ಶ್ಯಾಮ ಮುತಗೇಕರ್, ಕೃಷ್ಣ ಪಾಟೀಲ, ಸಚಿನ ಪಾಟೀಲ, ಶರತ್ ಪಾಟೀಲ, ರಾಧಿಕಾ ಮುತಗೇಕರ್, ಬಾಗಣ್ಣ ಮಲ್ಲವ್ವಗೋಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.