This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಸಮಗ್ರ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ – ಲಕ್ಷ್ಮೀ ಹೆಬ್ಬಾಳಕರ್ Comprehensive sector development is my goal - Lakshmi Hebbalkar


 

ಬೆಳಗಾವಿ :
ಗ್ರಾಮೀಣ ಭಾಗದಲ್ಲಿ ಶಾಶ್ವತ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತ ಬಂದಿದ್ದು ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಅಭಿವೃದ್ಧಿ ಕಾಮಗಾರಿ ತರಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ ಎಚ್ ಗ್ರಾಮದ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ ಶಾಸಕಿ ಬುಧವಾರ ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಈ ಹಿಂದೆ ಎಂದೂ ಈ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ನಾನು ಶಾಸಕಿಯಾಗಿ ಆಯ್ಕೆಗೊಂಡ ಬಳಿಕ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸುತ್ತ ಬಂದಿದ್ದೇನೆ. ಮೂಲಸೌಕರ್ಯಗಳ ಅಭಿವೃದ್ಧಿಯಿಂದ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಕಾಣುತ್ತದೆ ಎಂಬ ಆಶಯವಿದೆ. ಸಮಗ್ರ ಕ್ಷೇತ್ರವೇ ನನ್ನ ದೃಷ್ಟಿಯಾಗಿದ್ದು, ಯಾವುದೇ ಭಾಗ ಹಿಂದುಳಿಯಬಾರದೆನ್ನುವುದು ನನ್ನ ಧ್ಯೇಯ ಎಂದು ಹೇಳಿದರು. ಇದಾದ ನಂತರ ಗ್ರಾಮದಲ್ಲಿ ಆಯೋಜಿಸಲಾಗಿದ್ದು ಅರಿಷಿಣ – ಕುಂಕುಮ ಕಾರ್ಯಕ್ರಮದಲ್ಲೂ ಲಕ್ಷ್ಮೀ ಹೆಬ್ಬಾಳಕರ್ ಭಾಗಿಯಾಗಿ, ಕ್ಷೇತ್ರದ ಮಹಿಳೆಯರು ತಮ್ಮ ಮೇಲೆ ತೋರುತ್ತಿರುವ ಅಪಾರ ಪ್ರೀತಿಗೆ ತಲೆ ಬಾಗುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಯಾರು ನಿಜವಾಗಿ ಕೆಲಸ ಮಾಡುತ್ತಾರೆ, ಯಾರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಅಂತವರನ್ನು ಬೆಂಬಲಿಸಬೇಕು. ಯಾವಾಗಾದರೊಮ್ಮೆ ಬಂದು ಜನರನ್ನು ಮರುಳು ಮಾಡುವವರನ್ನು ನಂಬಬಾರದು. ಅವರು ಜನರನ್ನು ದಾರಿ ತಪ್ಪಿಸಿ ಮೋಸಮಾಡುತ್ತಾರೆ. ಅಂತವರಿಗೆ ಕ್ಷೇತ್ರದ ಅಭಿವೃದ್ಧಿ ಬೇಕಾಗಿಲ್ಲ. ಹಾಗಾಗಿ ಕ್ಷೇತ್ರದ ಜನರು ಜಾಗ್ರತರಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಬಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ತರಲು ಸಹಕರಿಸಿ ಎಂದು ಮನವಿ ಮಾಡಿದರು.

ಈ ಸಮಯದಲ್ಲಿ ಡಾ.ಅಸ್ಕಿ, ನಮಸಯ್ಯ ಹಿರೇಮಠ್, ಮಹಾದೇವಿ ರಾಮಚಣ್ಣನ್ನವರ, ಅನುಸೂಯಾ ರಾಮಚಣ್ಣನ್ನವರ, ರೂಬಿನ ಶೈಖ್, ಮಂಗಲ ಬಗನ್ನವರ, ಅಂಜನಾ ಬೆಳಗಾಂವ್ಕರ್, ಯಲ್ಲಣ್ಣ ಬಾಬಣ್ಣವರ, ನಿಲೇಶ್ ಚಂದಗಡಕರ, ವಿಠ್ಠಲ ಕುರುಬರ, ಮಾರುತಿ ಸುಳಗೇಕರ್, ರವಿ ಬಾಳನ್ನವರ, ಚಂದ್ರಕಾಂತ ಧರೆನ್ನವರ, ಜೈನೂಲ್ಲಾ ಕುಡಚಿ, ಸುರೇಶ ಪಗಡಿ, ಗಣಪತಿ ಬಾಳನ್ನವರ ಹಾಗೂ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply