ಬೆಳಗಾವಿ :
ಇಲ್ಲಿಯ ಕೆ.ಎಲ್. ಇ. ಸಂಸ್ಥೆಯ ಜಿ. ಎ. ಪ್ರೌಢಶಾಲೆಯಲ್ಲಿ ಡೆಂಘೀ ಜ್ವರ ಜಾಗೃತಿ ದಿನವನ್ನು’ ಇಕೋ ಕ್ಲಬ್ ‘ ಹಾಗೂ ‘ವಿಜ್ಞಾನ ಸಂಘದ’ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.
ಜೀವ ವಿಜ್ಞಾನ ಶಿಕ್ಷಕ ಎಂ.ಎಸ್. ಮಗದುಮ್ ಅವರು ವಿದ್ಯಾರ್ಥಿಗಳಿಗೆ ಡೆಂಘೀ ಜ್ವರ ಎಂದರೇನು ? ಡೆಂಘೀ ಜ್ವರದ ಮುಖ್ಯ ಲಕ್ಷಣಗಳು, ಡೆಂಘೀ ಜ್ವರದ ನಿಯಂತ್ರಣ ಹೇಗೆ ?ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಪ್ರತಿ ವರ್ಗ ಕೋಣೆಯಲ್ಲಿ ಜಾಹೀರಾತುಗಳ ಪ್ರದರ್ಶನವನ್ನು ಮಾಡಲಾಯಿತು.
ಶಾಲೆಯ ಉಪ- ಪ್ರಾಚಾರ್ಯ ಎಸ್.ಆರ್. ಗದಗ ಹಾಗೂ ಎಲ್ಲ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.