ಬೆಳಗಾವಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕ್ಷೇತ್ರದ ಹಲವು ಬೇಡಿಕೆ ಸಲ್ಲಿಸಿದರು.
ಕುಮಟಾ ರೈಲು ನಿಲ್ದಾಣದಲ್ಲಿ 2ನೇ ಪ್ಲಾಟ್ಫಾರಂ ನಿರ್ಮಿಸಬೇಕು. ಈಗಾಗಲೇ ಇರುವ ಪ್ಲಾಟ್ಫಾರಂನ ಎತ್ತರವನ್ನು ಏರಿಸಬೇಕು ಎಂದು ಹೇಳಲಾಗಿದೆ.
ಬೆಂಗಳೂರು-ಮುರುಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಿಸಬೇಕು. ಕಾಚಿಗುಡ ಎಕ್ಸ್ ಪ್ರೆಸ್ ಮುರುಡೇಶ್ವರದಿಂದ ಕಾರವಾರದವರೆಗೆ ವಿಸ್ತರಿಸಬೇಕು. ಖಾನಾಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ಕೆಳ ಸೇತುವೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸುವಂತೆ ಆಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.