ಬೆಂಗಳೂರು :
ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ದೆಹಲಿಯ ಕರ್ನಾಟಕ ಪ್ರತಿನಿಧಿ-2 ಸಚಿವ ಸಂಪುಟ ಸಚಿವರ ಸ್ಥಾನಮಾನದೊಂದಿಗೆ ನೇಮಕ ಮಾಡಲಾಗಿದೆ.
ಈಗಾಗಲೇ ಟಿ.ಬಿ. ಜಯಚಂದ್ರ ಅವರನ್ನು ದೆಹಲಿಯ ಕರ್ನಾಟಕ ಪ್ರತಿನಿಧಿ-1 ಆಗಿ ನೇಮಕ ಮಾಡಲಾಗಿದೆ. ಇದೀಗ ಕಾಂಗ್ರೆಸ್ ನ ಹಿರಿಯ ನಾಯಕರು ಆಗಿರುವ ಪ್ರಕಾಶ ಹುಕ್ಕೇರಿ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಎರಡನೆಯ ಪ್ರತಿನಿಧಿಯಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.