ಇಟಗಿ :
ಇಟಗಿ ಗ್ರಾಮದ ಖಾನಾಪುರ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ವಿ.ವಿ.ಬಡಿಗೇರ ಅವರ ಮೂರನೇ ಕವನ ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಮೂರನೇ ಕವನ ಸಂಕಲನ ಭಾವ ಬಾಂದಳವನ್ನು ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದ ಡಾ.ಶ್ರೀ ಪಾಲಾಕ್ಷ ಶಿವಯೋಗೀಶ್ವರರು ಲೋಕಾರ್ಪಣೆಗೊಳಿಸಿದರು. ರುದ್ರಪ್ಪ ಹುಣಶೀಕಟ್ಟಿ, ಬಸವರಾಜ ನಾವಲಗಟ್ಟಿ, ಮಹಾರುದ್ರ ಬೈಲವಾಡ ಹಾಗೂ ಇತರರು ಉಪಸ್ಥಿತರಿದ್ದರು.