ಬೆಳಗಾವಿ :
ಬೆಳಗಾವಿ ಬಸವಣ ಗಲ್ಲಿಯ ನಿವಾಸಿ , ರವಿವಾರ ಪೇಠದ ಹಳೆ ತಲೆಮಾರಿನ ಹಿರಿಯ ವ್ಯಾಪಾರಸ್ಥರು, ಜೈನ ಸಮಾಜದ ಪ್ರಮುಖರು ಹಾಗೂ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕ ಕುಂತಿನಾಥ ಕಲಮನಿ ಇವರ ತಂದೆಯವರಾದ ಶ್ರೀಮಂಧರ ಭೀಮಪ್ಪ ಕಲಮನಿ (ವ.83) ಇವರು ಇಂದು ಶನಿವಾರ ದಿನಾಂಕ 22 ರಂದು ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆ ರವಿವಾರ ಜುಲೈ 23 ರಂದು ಬೆಳಿಗ್ಗೆ 8 ಗಂಟೆಗೆ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ನಡೆಯಲಿದೆ.
ಮೃತರು ತಮ್ಮ ಹಿಂದೆ ಪತ್ನಿ , ಓರ್ವ ಪುತ್ರ, ಮೂವರು ಪುತ್ರಿಯರು , ಸೊಸೆ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.