ಖಾನಾಪುರ :ಖಾನಾಪುರ ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಸಂಜಯ ಕುಬಳ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಗುಂಡ ಕತ್ತಿ, ಬಿಜೆಪಿ ಯುವ ಮುಖಂಡರಾದ ಪಂಡಿತ ಓಗ್ಲೆ, ಮೋಹನ ಪಾಟೀಲ, ನಾರಾಯಣ ಗೋಡಿ, ಮಾರುತಿ ಚೋಪ್ಡೆ, ಅಶೋಕ ಬೆಳಗಾಂವ, ಸಂಜಯಪ್ಪ ಬೆಳಗಾವಿ, ಯಳಗುಲ್ಕರ್, ಶಿವಾಜಿ ಬಿರ್ಜೆ, ಭರಮಣಿ ಪಾಟೀಲ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.