ಕಳ್ಳರ ಬೇಟೆ ಮುಂದುವರಿಸಿದ ಡಿಸಿಪಿ ಸ್ನೇಹಾ ಪಡೆ..!
ಶಹಾಪೂರ ಠಾಣೆ ಪೊಲೀಸರಿಂದ ಖತರನಾಕ ಸರಗಳ್ಳನ ಬಂಧನ..!
ಕದ್ದ ಚಿನ್ನ ಅಡವಿಟ್ಟು ಪಡೆದ ಹಣ ಎಷ್ಟು ಗೊತ್ತೆ..?
ಬೆಳಗಾವಿ: ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಯಡಾ ಮಾರ್ಟಿನ್ ಮಾರ್ಬನ್ಯಾ ಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ನೇತೃತ್ವದಲ್ಲಿ ಕಳ್ಳರ ಬೇಟೆ ಮುಂದುವರಿಸಿದ್ದು ಇಂದು ಮತ್ತೆ ಒರ್ವ ಖತರನಾಕ ಸರಗಳ್ಳನನ್ನು ಬಂಧಿಸುವಲ್ಲಿ ಶಹಾಪೂರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಸೋಮೇಗೌಡ ಜಿ. ಯು ಸಹಾಯಕ ಪೊಲೀಸ್ ಆಯುಕ್ತರು ಮಾರ್ಕೆಟ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ ಹಾಗೂ ಪಿಎಸ್ಐ ಮನಿಕಂಠ ಪೂಜಾರಿ ನೇತೃತ್ವದ ತಂಡ ದಿನಾಂಕ: 04/07/2024 ರಂದು ಆರೋಪಿತನಾದ ಪ್ರಜ್ವಲ್ ಜಯಪಾಲ ಖಾನಜಿ ಸಾ|| ಬಸ್ತವಾಡರೋಡ ದಾಮಣೆ ಬೆಳಗಾವಿ ಇವನಿಗೆ ಶಹಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 32/2024 ಕಲಂ 392 ಐಪಿಸಿ ನೇದ್ದರಲ್ಲಿ ದಸ್ತಗಿರಿ ಮಾಡಿ ಈತನಿಂದ ಬೆಳಗಾವಿ ನಗರದ ಶಹಾಪೂರ. ತಿಲಕವಾಡಿ, ಉದ್ಯಮಬಾಗ ಪ್ರದೇಶಗಳಲ್ಲಿ ಸರಗಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಮಣಪ್ಪುರಂ ಪೈನಾನ್ಸ ಶಾಖೆಯಲ್ಲಿ ಅಡವಿಟ್ಟಿದ್ದ 7,50,000/-ಕಿಮ್ಮತ್ತಿನ 103.430ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಗುನ್ನೆಗೆ ಬಳಸಿದ 25,000/- ರೂ ಕಿಮ್ಮತ್ತಿನ ಹಿರೋ ಸ್ಟೆಂಡರ್ ಪ್ಲಸ್ ಮೋಟಾರ ಸೈಕಲ್ನ್ನು ಸೇರಿ ಒಟ್ಟು 7,75,000/-ರೂ ಕಿಮ್ಮತ್ತಿನ ಸ್ವತ್ತನ್ನು ದಿನಾಂಕ: 10/07/2024 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ತನಿಖೆಯಲ್ಲಿ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಎಸ್ ಎಸ್ ಸಿಮಾನಿ, ಪಿ.ಎಸ್.ಐ ಮಣಿಕಂಠ ಪೂಜಾರಿ, ಎಸ್ ಎನ್ ಬಸ್ವಾ, ಎ,ಎಸ್,ಐ ಆರ್ ಆಯ್ ಸನದಿ, ಸಿ.ಎಚ್.ಸಿ ರವರಾದ ಸಂತೋಷ ಪಾಟೀಲ ಸಿಸಿಬಿ ಘಟಕ, ಎಸ್ ಎಮ್ ಗುಡದೈಗೋಳ, ನಾಗರಾಜ ಓಸಪ್ಪಗೋಳ, ಸಿಪಿಸಿ ಗಳಾದ ಸುರೇಶ ಎಮ್ ಕಾಂಬಳೆ, ಆನಂದ ಖೋತ, ಹಣಮಂತ ವಿಭೂತಿ. ಅಮರನಾಥ ದಂಡಿನ, ಗಂಗವ್ವ ಈ ಪಾರ್ವತಿ ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.