ಬೆಳಗಾವಿ :
ನಿಮ್ಮ ಊರಲ್ಲಿ ವಿಶ್ವವಿದ್ಯಾಲಯ ಕಟ್ಟಿ ನಿಮ್ಮ ಹಾಗೂ ಮಕ್ಕಳ ಭವಿಷ್ಯ ಉಜ್ವಲ ಮಾಡುತ್ತೇವೆ ಎಂದು ನಂಬಿಸಿ ಇನ್ನೂ ವಿಶ್ವವಿದ್ಯಾಲಯ ಕಾಮಾಗಾರಿ ಪ್ರಾರಂಭಕ್ಕೂ ಮುನ್ನವೇ ಅಲ್ಲಿನವರ ಬಾಳನ್ನು ನರಕಯಾತನೆ ಮಾಡುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹಾಗೂ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರಿಗೆ ನ್ಯಾಯ ಕೊಡಿಸಲು ಹಾಗೂ ಸಮಾಧಾನ ಪಡಿಸಲು ಸ್ವತಃ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ರಾಣಿ ಚನ್ನಮ್ಮ ವಿವಿ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು.
ವಿವಿ ಕಾಮಗಾರಿ ಪ್ರಾರಂಭವಾದಾಗಿನಿಂದ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಕೂಗು ಕೇಳಿ ಬಂದ ಮೇಲೆ ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ಜಾಗೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಲು ಡಿಸಿ ಸ್ವತಃ ಬಂದರು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಇಲ್ಲಿನ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಕಾಮಗಾರಿ ನಡೆಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ರೈತರ ಸಮ್ಮುಖದಲ್ಲಿಯೇ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತರಾಟೆಗೆ ತೆಗೆದುಕೊಂಡ ಈ ಹಿಂದೆ ಕಾಮಗಾರಿ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಸಹ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ವಿವಿ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಇದರಿಂದ ಯಾವೊಬ್ಬ ರೈತನಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ನಾಟಕವಾಡಿ ಸಿಕ್ಕಿಬಿದ್ದ ವಿವಿ ಅಧಿಕಾರಿಗಳು…?
ರೈತರ ಸಮಸ್ಯೆ ಬಗ್ಗೆ ಕೇಳಿದಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವರು ನಮಗೆ ರೈತರಿಂದ ಯಾವುದೇ ತಕರಾರು ಬಂದಿಲ್ಲ ಎಂದು ಸುಳ್ಳು ಹೇಳಿದರು. ಆಗ ರೈತರು ಮತ್ತು
ಹಿಂದೆ ಎಸಿಯವರು ಕರೆದ ಸಭೆಗೂ ವಿವಿಯವರು ಬಂದಿಲ್ಲ ಎನ್ನುವ ಮಾಹಿತಿ ನೀಡಿದ್ದರು.
ಆದರೆ ರೈತರು ವಿವಿಯವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದರ ಬಗ್ಗೆ ದಾಖಲೆ ತೋರಿಸಿದಾಗ ಸಂಬಂಧಿಸಿದ ಅಧಿಕಾರಿಗಳು ಉತ್ತರ ಹೇಳಲು ನಿರುತ್ತರವಾದರು. ರಸ್ತೆ ನಿರ್ಮಾಣ ಸಂದರ್ಭದಲ್ಲಿ ವಿವಿಯವರು ರೈತರ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ, ಈ ಬಗ್ಗೆ ಕೇಳಿದರೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಅಲ್ಲಿದ್ದವರು ಆರೋಪಿಸಿದರು.