ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.
ಭಾನುವಾರ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶರಣ್ ಆಚಾರ್ಯ ಹಾಗೂ ವಿದ್ವಾನ್ ರಾಮಕೃಷ್ಣ ಭಟ್ ಕೆರೇಕೈ ಅವರು ಜಾತ್ರೆಯ ದಿನಾಂಕ ಪ್ರಕಟಿಸಿದರು.
2026ರ ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಒಂಬತ್ತು ದಿನಗಳ ಕಾಲ ಈ ಅದ್ದೂರಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.
ಫೆ.24 ರಂದು ದೇವಿಯ ರಥದ ಕಲಶಾರೋಹಣ ಮತ್ತು ಕಲ್ಯಾಣ ಪ್ರತಿಷ್ಠೆ,ಫೆ.25 ರಂದು ಲೋಕವಿಖ್ಯಾತ ಅದ್ದೂರಿ ರಥೋತ್ಸವ,ಫೆ.26ರಿಂದ ಸೇವೆಗಳು ಆರಂಭವಾಗಲಿವೆ.


