This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Crime News

ನೃತ್ಯಗಾರ್ತಿ ಬಾಲೆ ಮೇಲೆ ಸಾಮೂಹಿಕ ಅತ್ಯಾಚಾರ


 

ದುಮ್ಕಾ (ಜಾರ್ಖಂಡ್):
15 ವರ್ಷದ ನೃತ್ಯಗಾರ್ತಿ ಬಾಲೆಯನ್ನು ಆಕೆಯ ತಾಯಿ ಎದುರೇ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದು ಇನ್ನುಳಿದ ದುರುಳರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

ಕರುಳು ಹಿಂಡುವ ಘಟನೆ :
ಭಾನುವಾರ ರಾತ್ರಿ ದಿಯೋಗರ್ ಜಿಲ್ಲೆಯಲ್ಲಿ ಈ ಅತ್ಯಾಚಾರ ನಡೆದಿದೆ. ಅತ್ಯಾಚಾರಕ್ಕೊಳಗಾದ ಬಾಲೆ ಡ್ಯಾನ್ಸರ್. ಆಕೆ ಹಳ್ಳಿಯೊಂದಕ್ಕೆ ಡ್ಯಾನ್ಸ್ ಪ್ರದರ್ಶನಕ್ಕೆ ತೆರಳಿದ್ದಳು. ಆದರೆ, ಕೊನೆಕ್ಷಣದಲ್ಲಿ ಪ್ರದರ್ಶನ ರದ್ದುಗೊಂಡಿದೆ. ಇದರಿಂದ ಆಕೆ ಮತ್ತು ಆಕೆಯ ತಾಯಿ ಕಾಲ್ನಡಿಗೆಯಲ್ಲಿ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಆರು ಜನ ಅಡ್ಡಗಟ್ಟಿ ಸಮೀಪದ ಬಹಾದೂರಪುರ ಅರಣ್ಯಕ್ಕೆ ಕರೆದೊಯ್ದು
ನೃತ್ಯಗಾರ್ತಿ ಬಾಲೆಯನ್ನು ಅತ್ಯಾಚಾರಗೈದಿದ್ದಾರೆ. ಆದರೆ ಇದಕ್ಕೆ ಆಕ್ಷೇಪಿಸಿದ ಆಕೆಯ ತಾಯಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಘಟನೆ ನಂತರ ತಾಯಿ-ಮಗಳು ತಡರಾತ್ರಿ ಮಾಧುಪುರ ತಲುಪಿ ಪೊಲೀಸರಿಗೆ ಘಟನೆ ವಿವರಿಸಿದ್ದಾರೆ.

ಪೋಲಿಸರು ಪ್ರಾಥಮಿಕ ಚಿಕಿತ್ಸೆಗೆ ಬಾಲೆಯನ್ನು ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೋಕ್ಸೊ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆಕೆಯ ವೈದ್ಯಕೀಯ ಪರೀಕ್ಷೆ ವರದಿ ನಿರೀಕ್ಷಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವವರ ಬಂಧನಕ್ಕೆ ಎಸ್ ಐಟಿ ರಚಿಸಲಾಗಿದೆ.
ಕಾಮುಕರು ಇವರ ಬಳಿಯಿದ್ದ ಮೊಬೈಲ್ ಹಾಗೂ ಆಧಾರ್ ಕಾರ್ಡ್ ಗಳನ್ನು ಸಹಾ ದೋಚಿದ್ದಾರೆ.


Jana Jeevala
the authorJana Jeevala

Leave a Reply