ಅಧ್ಯಕ್ಷ ಸ್ಥಾನಕ್ಕಾಗಿ ಮಹಿಳಾ ಸದಸ್ಯೆಯ ಕಿಡ್ನಾಪ್, ಸದಸ್ಯನಿಗೆ ಪ್ರಾಣ ಬೇದರಿಕೆ..!
ಹಿಂಡತಿಯನ್ನು ಕಾಪಾಡುವಂತೆ ಬೆಳಗಾವಿ ಎಸ್ಪಿಗೆ ದೂರು ನೀಡಿದ ಪತಿರಾಯ..!
ಸೌಂದತ್ತಿ ಮುಸ್ಲಿಂ ಕುಟುಂಬ ದೌರ್ಜನ್ಯ ವಿರುಧ್ಧ ಪೊಲೀಸ್ ಠಾಣೆ ಹತ್ತಿದ ಸದಸ್ಯರು..!
ಬೆಳಗಾವಿ : ಜಿಲ್ಲೆಯ ಸೌಂದತ್ತಿ ತಾಲೂಕಿನ ಗ್ರಾಮ ಪಂಚಾಯಿತಿಯೊಂದರಲ್ಲಿ ಕಳೆದ 40 ವರ್ಷಗಳಿಂದ ತಮ್ಮದೆ ಕಾರಬಾರು, ದರಬಾರು ನಡೆಸುತ್ತಿರುವ ಮುಸ್ಲಿಂ ಕುಟುಂಬ ಹಾಗೂ ಚುನಾಯಿತ ಸದಸ್ಯರು ಈ ಬಾರಿಯೂ ತಾವೇ ಗ್ರಾ ಪಂ ಅಧ್ಯಕ್ಷ ಆಗಬೇಕು ಎಂಬ ದುರಾಸೆಯಿಂದ ಅಧ್ಯಕ್ಷ, ಸ್ಥಾನದ ಆಕಾಂಕ್ಷಿ ಸದಸ್ಯನ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಪ್ರಾಣ ಬೇದರಿಕೆ ಹಾಕಿದಲ್ಲದೇ, ತಮಗೆ ವಿರೋಧಿಸಿರುವ ಮತ್ತೋರ್ವ ದಲಿತ ಮಹಿಳಾ ಸದಸ್ಯೆಯೊಬ್ಬಳನ್ನು ಪೊಲೀಸ್ ಸಿಬ್ಬಂದಿ ಸಹಾಯದಿಂದ ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ ಪುಢಾರಿತನ ಮೆರೆದಿರುವ ಘಟನೆ ಸೌಂದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಸೌಂದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯಿತಿಗೆ ಅಕ್ಟೋಬರ್ 28 ರಂದು ಒಟ್ಟು 21 ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಬಂದಿದೆ.
ಇದೆ ತಿಂಗಳು 28 (ನವೆಂಬರ್) ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದೂಳಿದ “ಅ” ವರ್ಗಕ್ಕೆ ನಿಗಡಿಪದಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಬಂದಿರುವುದರಿಂದ ಸಾಮಾನ್ಯ ವರ್ಗದಿಂದ ಆಯ್ಕೆಯಾಗಿರುವ ಸದಸ್ಯರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ 40 ವರ್ಷಗಳಿಂದ ಈ ಗ್ರಾಮದಲ್ಲಿ ಬಾರಿಗಿಡದ ಎಂಬ ಮುಸ್ಲಿಂ ಕುಟುಂಬದವರು ಸ್ಥಳಿಯ ಕಾಂಗ್ರೇಸ್ ಮುಖಂಡ ಹಾಗೂ ಶಾಸಕರ ಬೆಂಬಲದೊಂದಿಗೆ ದರ್ಬಾರ್ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಖೋಟಾ ಬಂದಾಗ ಅವರಿಗೆ ಎಲ್ಲ ಜಾತಿಯ ಸದಸ್ಯರು ಬೆಂಬಲ ಕೊಟ್ಟು ಅಧ್ಯಕ್ಷ ಮಾಡಿದ್ದಾರೆ. ಆದರೆ ಈ ಬಾರಿ ಸಾಮಾನ್ಯರಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಅದಕ್ಕಾಗಿ ನೀವು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಲ ಸದಸ್ಯರು ಹೇಳಿದ್ದಾರೆ.
ಇದಕ್ಕೆ ಸುತಾರಾಂ ಒಪ್ಪದ ಆ ಕುಟುಂಬ ನಮ್ಮ ಸದಸ್ಯೆ ಪೈರೋಜಾ ಬಾಬಾಸಾಬ ಬಾರಿಗಿಡದ ಅವಳೇ ಅಧ್ಯಕ್ಷ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ಪ್ರಕಾಶ ಶಿವಾನಂದ ಪಾಶ್ಚಾಪೂರ ಎಂಬುವರು ಧೂಪದಾಳ ಗ್ರಾಮದಿಂದ ಈ ಪಂಚಾಯಿತಿಗೆ ಸದಸ್ಯನಾಗಿ ಆಯ್ಕೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಈತ ಆಕಾಂಕ್ಷಿಯಾಗಿರುವ ಸುದ್ದಿ ತಿಳಿದ ಬಾರಿಗಿಡದ ಸಹೋದರರು ಸದಸ್ಯ ಪ್ರಕಾಶನಿಗೆ ಕರೆ ಮಾಡಿ ಹಣ ಪಡೆದು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ. ಇದಕ್ಕೆ ಆತ ಒಪ್ಪಿಲ್ಲ. ಆಗ ಆತನ ಮನೆಗೆ ನುಗ್ಗಿ ಮೊಬೈಲ್ ಕಸಿದುಕೊಂಡಿದ್ದಾರೆ. ಆತನ ಮೇಲೆ ಹಲ್ಲೆ ನಡೆಸಿ, ಸ್ಪರ್ಧಿಸದಂತೆ ಆತನಿಗೆ ಹಾಗೂ ಕುಟುಂಬಸ್ಥರಿಗೆ ಪ್ರಾಣ ಬೆದರಿಕೆ ನೀಡಿ ಬಂದಿದ್ದಾರೆ.
ಏತನ್ಮಧ್ಯೆ ದಲಿತ ಸದಸ್ಯೆ ಮಲ್ಲವ್ವಾ ಬಸ್ಸಪ್ಪಾ ಮಾದರ ಎಂಬಾಕೆ ಬಾರಿಗಿಡದ ಕುಟುಂಬದವರನ್ನು ಬಿಟ್ಟು ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನೀಡಬೇಕು ಎಂದು ಅಭಿಪ್ರಾಯ ನೀಡಿದ್ದಾಳೆ. ಅದಕ್ಕಾಗಿ ತಕ್ಷಣ ಅವಳನ್ನು ಅಪಹರಿಸಿದ ಇವರು ದೊಡ್ಡಬಳ್ಳಾಪೂರ ಪೊಲೀಸ್ ಇಲಾಖೆಯಲ್ಲಿರುವ ಸಂಬಂಧಿ ಹೀನಾ ಜೈಲಾನಿ ಪರಸನ್ನವರ ಎಂಬುವರು ನೇತೃತ್ವದಲ್ಲಿ ಅಜ್ಞಾತ ಸ್ಥಳದಲ್ಲಿ ಕೂಡಿಟ್ಟು ಆಕೆಯ ಪತಿಗೆ ಕರೆ ಮಾಡಿ ಧಮಕಿ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಇವರಿಂದ ಭಯಭೀತಗೊಂಡಿರುವ ದಲಿತ ಸದಸ್ಯೆ ಪತಿ ಬಸಪ್ಪಾ ಮಾದರ ಎಂಬಾತ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ನ್ಯಾಯ ಕೇಳಿದ್ದಾನೆ. ಆದರೆ ಅಲ್ಲಿ ಸರಿಯಾಗಿ ಸ್ಪಂದಿಸದ ಕಾರಣ ಬೆಳಗಾವಿ ಎಸ್ಪಿ ಕಛೇರಿಗೆ ಬಂದು ದೂರು ನೀಡಿದ್ದಾರೆ.
ಮತ್ತೊಂದೆಡೆ ಪ್ರಾಣ ಭಯದಲ್ಲಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪ್ರಕಾಶ ಪಾಶ್ಚಾಪೂರ ಅವರೂ ಸೌದಂತ್ತಿ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಪೊಲೀಸರು ಸ್ವೀಕರಿಸಿಲ್ಲ. ನಂತರ ಎಸ್ಪಿ ಅವರ ಕಡೆ ಹೋಗುವುದಾಗಿ ಹೇಳಿದಾಗಿ ಅವರು ದೂರು ಸ್ವೀಕರಿಸಿರುವುದಾಗಿ ತಿಳಿದು ಬಂದಿದೆ.
ಎರಡು ದೂರಿನಲ್ಲಿ ಯಕ್ಕುಂಡಿ ಗ್ರಾಮದ ಬಾರಿಗಿಡದ ಕುಟುಂಬದವರ ವಿರುಧ್ಧ ದೂರು ನೀಡಲಾಗಿದೆ.
ಅಪಹರಣಕ್ಕೊಳಗಾಗಿರುವ ಮಹಿಳಾ ಸದಸ್ಯೆ ಮಲ್ಲವ್ವಾ ಮಾದರ ಪತಿ ಬಸ್ಸಪ್ಪಾ ಮಾದರ ಬೆಳಗಾವಿ ಎಸ್ಪಿ ಕಛೇರಿಗೆ ಬಂದು ೧. ಸದಸ್ಯೆ ಪೈರೋಜಾ ಬಾಬಾಸಾಬ ಬಾರಿಗಿಡದ ಹಾಗೂ ನಾಲ್ವರು ಸಹೋದರರಾದ ೨. ನೀಜಾಮುದ್ದಿನ ಬುಡ್ಡೆಸಾಬ ಬಾರಿಗಿಡದ ೩. ಬಾಪುಸಾಬ ಬುಡ್ಡೆಸಾಬ ಹಾಗೂ ೪. ಬಾವಾಸಾಬ ಬುಡ್ಡೆಸಾಬ ೫. ಜಲಾಲುದ್ಧೀನ ಬುಡ್ಡೆಬಾಬ ಹಾಗೂ ಮತ್ತೋರ್ವ ೬. ದಿಲಾವರಸಾಬ ಬಂದೆನವಾಜ ಮುಲ್ಲಾ ಎಂಬುವರ ವಿರುಧ್ಧ ಅಪಹರಣ, ಪ್ರಾಣ ಬೆದರಿಕೆ, ಕೊಲೆ ಯತ್ನ, ಸೇರಿದಂತೆ ಆರೋಪಿಸಿ ದೂರು ನೀಡಿದ್ದಾರೆ.
ಸೌಂದತ್ತಿಯಲ್ಲಿ ಠಾಣೆಯಲ್ಲಿ ಸದಸ್ಯ ಪ್ರಕಾಶ ಪಾಶ್ಚಾಪೂರ ಮೂವರು ಸಹೋದರರಾದ ೧. ನೀಜಾಮುದ್ದಿನ ಬುಡ್ಡೆಸಾಬ ಬಾರಿಗಿಡದ ೨. ಬಾಪುಸಾಬ ಬುಡ್ಡೆಸಾಬ ಹಾಗೂ ೩. ಬಾಬಾಸಾಬ ಬುಡ್ಡೆಸಾಬ
ಎಂಬುವರ ವಿರುಧ್ಧ ಪ್ರಾಣ ಬೆದರಿಕೆ, ಕೊಲೆ ಯತ್ನ, ಕಳ್ಳತನ ಸೇರಿದಂತೆ ಆರೋಪಿಸಿ ದೂರು ನೀಡಿದ್ದಾರೆ.
ಈ ಪ್ರಕರಣದಲ್ಲಿ ಆಯ್ಕೆಯಾಗಿರುವ ಕೆಲ ಸದಸ್ಯರು ಹಾಲಿ ಹಾಗೂ ಕೆಲ ಸದಸ್ಯರು ಮಾಜಿ ಶಾಸಕರ ಕಡೆಯವರಾಗಿರುವದರಿಂದ ಇದರಲ್ಲಿ ಇಬ್ಬರು ಶಾಸಕರು ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
ಈ ಇಬ್ಬರು ಗ್ರಾ ಪಂ ಸದಸ್ಯರು ಹಾಗೂ ಕುಟುಂಬದವರು ನೀಡಿರುವ ದೂರನ್ನು ಪರಿಗಣಿಸಿ ಖಡಕ ಪೊಲೀಸ್ ಅಧಿಕಾರಿಯಾಗಿರುವ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ ಅವರು ಯಾವ ಕ್ರಮ ಕೈಗೊಳ್ಳುವರು ಎಂದು ಕಾದು ನೋಡಬೇಕು.