ಬೆಳಗಾವಿ: ಬೆಳಗಾವಿಯ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ವತಿಯಿಂದ ಬುಧವಾರದಂದು ವಡಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಸಾಮೂಹಿಕ ಣಮೋಕಾರ ಮಂತ್ರ ಪಠಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿದ ಬೆಳಗಾವಿ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸಂಸ್ಥಾಪಕ ಶಿರ್ಲಾಲು ಬಿ.ಗುಣಪಾಲ ಹೆಗ್ಡೆ ಮಾತನಾಡಿ, ಣಮೋಕಾರ ಮಂತ್ರವು ಅತ್ಯಂತ ಶ್ರೇಷ್ಠ ಮಂತ್ರವಾಗಿದೆ. ಪ್ರತಿಯೊಬ್ಬರು ಇದನ್ನು ಪ್ರತಿದಿನವೂ ಪಠಿಸುವ ಮೂಲಕ ಮಾನವ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಗತ್ತಿಗೆ ಸತ್ಯ-ಅಹಿಂಸೆಯನ್ನು ಬೋಧಿಸಿದ ಭಗವಾನ್ ಮಹಾವೀರರ ಜನ್ಮದಿನದ ಸುಸಂದರ್ಭದಲ್ಲಿ
ಪ್ರಧಾನಿ ನರೇಂದ್ರ ಮೋದಿಯವರು ಈ ವಿಶೇಷ ಕಾರ್ಯಕ್ರಮಕ್ಕೆ ಕರೆ ನೀಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದು ಹೇಳಿದರು.
ಬುಧವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ “ಸಾಮೂೂಹಿಕ ವಿಶ್ವ ಣಮೋಕಾರ ಮಂತ್ರ ಪಠಣ” ಕಾರ್ಯಕ್ರಮದಲ್ಲಿ ಬೆಳಗಾವಿಯ ಶ್ರಾವಕ-ಶ್ರಾವಕಿಯರು ಭಾಗಿಯಾಗಿ ಸಾಮೂಹಿಕವಾಗಿ ಣಮೋಕಾರ ಮಂತ್ರ ಪಠಣ ಮಾಡಿದರು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟ
ಬೆಳಗಾವಿ ಘಟಕದ ಅಧ್ಯಕ್ಷ ಮಹಾವೀರ ಪೂವಣಿ, ಕಾರ್ಯದರ್ಶಿ ವೀರೇಂದ್ರ ಹೆಗ್ಡೆ, ಅಜಿತ ಪ್ರಸಾದ ಸೇರಿದಂತೆ ಅನೇಕರು ಭಾಗವಹಿಸಿದ್ದರು.