ನವದೆಹಲಿ: ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ
ಏರಿಕೆಯಾಗಿದ್ದು, 18.50 ರೂ. ಹೆಚ್ಚಳವಾಗಿದೆ. ಆದರೆ 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವ ವ್ಯತ್ಯಾಸವಾಗಿಲ್ಲ.
ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರಗಳ ಪ್ರಕಾರ, ಡಿಸೆಂಬರ್ 1, 2024 ರಿಂದ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 18.50 ರೂ. ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದಿನಿಂದ ಡಿಸೆಂಬರ್ 1ರಿಂದ 19 ಕೆಜಿ ಎಲ್ಪಿಜಿ ಸಿಲಿಂಡರ್ 1818.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 1927 ರೂ. ಮುಂಬೈನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 16.50 ರೂ. ಇಲ್ಲಿ 1754.50 ರೂ.ಗೆ ದೊರೆಯುತ್ತಿದ್ದ ಸಿಲಿಂಡರ್ ಇಂದಿನಿಂದ 1771 ರೂ.ಗೆ ಲಭ್ಯವಾಗಲಿದೆ.
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ. 803 ರೂ.ಗೆ ಲಭ್ಯವಾಗುತ್ತಿದೆ. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ನ ಬೆಲೆ 829 ರೂ., ಮುಂಬೈನಲ್ಲಿ 802.50 ಮತ್ತು ಚೆನ್ನೈನಲ್ಲಿ 818.50 ರೂ.ಇದೆ.