ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಸ್ಟೋಡಿಯಲ್ ಡೆತ್..?
ಗಾಂಜಾ ಕೇಸಲ್ಲಿ ಪ್ರಾಣಬಿಟ್ಟ ಹುಕ್ಕೆರಿ ಮೂಲದ ಆರೋಪಿ..?
ಬೆಳಗಾವಿ : ಕೈದಿಯೊಬ್ಬನಿಗೆ ಗಾಂಜಾ ನೀಡಿರುವ ಕೇಸ್ಗೆ ಸಂಭಂದಿಸಿದಂತೆ ವ್ಯಕ್ತಿಯೊರ್ವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವಾಗ ಸಾವನ್ನಪ್ಪಿರುವ ಘಟನೆ ಬೆಳಗಾವಿ ಕಮೀಷನರ್ ವ್ಯಾಪ್ತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ 45 ರಿಂದ 50 ವರ್ಷದ ವರೆಗೆ ಒಳಗಿರುವ ಬಸಗೌಡ ಈರಗೌಡ ಪಾಟೀಲ ಆರೋಪಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಹಿಂಡಲಗೆ ಜೈಲಿನಿಂದ ವಿಚಾರಣೆ ಬಂದ ವ್ಯಕ್ತಿಯೊಬ್ಬನಿಗೆ ಈತ ಗಾಂಜಾ ನೀಡಿದ ಪ್ರಕರಣದಲ್ಲಿ ಠಾಣೆಗೆ ತಂದು ವಿಚಾರಣೆ ಮಾಡಲಾಗುತಿತ್ತು. ಆ ಸಂದರ್ಭದಲ್ಲಿ ಬಸಗೌಡ ಈತನಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಕೊಂಡಿದ್ದಾಗಿ ತಿಳಿದು ಬಂದಿದೆ.


