ಬೆಳಗಾವಿ:
ಗೋಕಾಕ ತಾಲೂಕಿನ ಪುಣ್ಯ ಕ್ಷೇತ್ರವಾದ ಅಂಕಲಗಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜಯದಶಮಿ ನಿಮಿತ್ಯವಾಗಿ ಕಾರ್ಯಕ್ರಮಗಳು ಜರುಗಲಿವೆ.
ಸೋಮವಾರ (ಅ.3) ರಾತ್ರಿ 8 ಗಂಟೆಗೆ ವಿವಿಧ ಸಾಂಸ್ಕೃತಿಕ ಡೊಳ್ಳಿನ ವಾಲಗ, ಡೊಳ್ಳಿನ ಪದಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿಯಲ್ಲಿ ಮಂಗಳವಾರ (ಅ.4) ಸಂಜೆ 5 ಗಂಟೆಗೆ ಶ್ರೀಮಹಾಲಕ್ಷ್ಮೀ ದೇವಿ ಹಾಗೂ ಹಣಬರಟ್ಟಿ ಶ್ರೀ ಮಹಾಲಕ್ಷ್ಮೀ ದೇವತೆಗಳು ಪಲ್ಲಕ್ಕಿಯೊಂದಿಗೆ ಅಗ್ನಿ ಹಾಯಲಿವೆ. ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಇರುವುದು.
ಸದರಿ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾಧಿಗಳು ಭಾಗವಹಿಸಿ, ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನ ಪಂಚರಾದ ಲಕ್ಕಪ್ಪಾ ಪೂಜೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
             
         
         
        
 
  
        
 
    