ಬೆಂಗಳೂರು : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಸಿಕ್ಕಿಬಿದ್ದಿರುವ ಇಬ್ಬರು ಗಗನಯಾತ್ರಿಗಳು ಕರೆತರಲು ನಾಸಾ ಮತ್ತು ಸ್ಪೇಸ್ಎಕ್ಸ್ ಕ್ರೂ-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಾರ್ಯಾಚರಣೆ ಪ್ರಾರಂಭಿಸಿದವು.
ಕಳೆದ ಜೂನ್ನಿಂದ ಬಾಹ್ಯಾಕಾಶದಲ್ಲಿ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಕರೆತರಲು ನಲ್ವರನ್ನು ಒಳಗೊಂಡ ಸ್ಪೇಸ್ಎಕ್ಸ್ ಕ್ರೂ-10 ಬಾಹ್ಯಾಕಾಶ ನೌಕೆ ಭಾನುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಿತು
ಗಗನಯಾತ್ರಿಗಳು ತಮ್ಮ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ನಲ್ಲಿ ಆಗಮಿಸಿದ ನಾಲ್ವರು ಗಗನ ಯಾತ್ರಿಗಳು ಸ್ವಲ್ಪ ಸಮಯದ ನಂತರ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ತಬ್ಬಿಕೊಂಡು ಹರ್ಷ ಹಂಚಿಕೊಳ್ಳುವುದನ್ನು ವೀಡಿಯೊ ತೋರಿಸಿದೆ.
ಹೊಸದಾಗಿ ಆಗಮಿಸಿದ ಗಗನಯಾತ್ರಿಗಳು ಒಬ್ಬೊಬ್ಬರಾಗಿ ತೇಲುತ್ತಿರುವಾಗ ಬಚ್ ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ತೆರೆದು ಗಂಟೆಯನ್ನು ಬಾರಿಸಿದರು. ಸುನೀತಾ ವಿಲಿಯಮ್ಸ್ ಅವರು ಡಾಕಿಂಗ್ ಸಮಯದಲ್ಲಿ ತಮ್ಮ ಸಿಬ್ಬಂದಿಯ ಫೋಟೋಗಳನ್ನು ತೆಗೆಯುತ್ತಿದ್ದಂತೆ ಮುಗುಳ್ನಕ್ಕರು.
ಬಚ್ ವಿಲ್ಮೋರ್ ಮತ್ತು ಸುನಿ ವಿಲಿಯಮ್ಸ್ ಅವರು ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಅದರ ಮೊದಲ ಸಿಬ್ಬಂದಿ ಪ್ರಯಾಣದಲ್ಲಿ ಪ್ರೊಪಲ್ಷನ್ ಸಮಸ್ಯೆಗಳನ್ನು ಅನುಭವಿಸಿದ ನಂತರ ಜೂನ್ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಸಿಲುಕಿಕೊಂಡಿದ್ದಾರೆ.
ಆದರೆ ಇದು 2023 ರಲ್ಲಿ ನಾಸಾ ಗಗನಯಾತ್ರಿ ಫ್ರಾಂಕ್ ರೂಬಿಯೊ ಇದ್ದ 371 ದಿನಗಳ ಸುದೀರ್ಘ ಸಮಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಇದ್ದ ದಾಖಲೆಗಿಂತ ತುಸು ಕಡಿಮೆ. ಮಿರ್ ಬಾಹ್ಯಾಕಾಶ ನಿಲ್ದಾಣದಲ್ಲಿ ನಿರಂತರವಾಗಿ 437 ದಿನಗಳನ್ನು ಕಳೆದ ರಷ್ಯಾದ ಗಗನಯಾತ್ರಿ ವಲೆರಿ ಪಾಲಿಯಕೋವ್ ಅವರ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
ವಿಲ್ಮೋರ್ ಮತ್ತು ವಿಲಿಯಮ್ಸ್ ಈಗ ಭೂಮಿಗೆ ವಾಪಸ್ ಬರಲು ತಯಾರಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಫ್ಲೋರಿಡಾ ಕರಾವಳಿಯಲ್ಲಿ ಅವರು ಸಾಗರದಲ್ಲಿ ಮಾರ್ಚ್ 19ರ ನಂತರ ಇಳಿಯಬಹುದು. ನಾಸಾದ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಕೂಡ ಹಿಂದಿರುಗುವ ಡ್ರ್ಯಾಗನ್ ಕ್ಯಾಪ್ಸುಲ್ನಲ್ಲಿ ಇರುತ್ತಾರೆ.
ಅವರನ್ನು ಕರೆತರಲು ಸ್ಪೇಸ್ಎಕ್ಸ್ ಕ್ರೂ-10 ತಂಡವು ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಹೊರಟಿತ್ತು.
ಈ ತಂಡವು ನಾಸಾದ ಗಗನಯಾತ್ರಿಗಳಾದ ಅನ್ನೆ ಮೆಕ್ಕ್ಲೈನ್ ಮತ್ತು ನಿಕೋಲ್ ಆಯರ್ಸ್, ಜಪಾನ್ನ ಟಕುಯಾ ಒನಿಶಿ ಮತ್ತು ರಷ್ಯಾದ ಕಿರಿಲ್ ಪೆಸ್ಕೋವ್ ಅವರನ್ನು ಒಳಗೊಂಡಿದೆ. ತಮ್ಮ ಕಾರ್ಯಾಚರಣೆಯ ಸಮಯದಲ್ಲಿ, ಇವರು ಮುಂದಿನ ಬಾಹ್ಯಾಕಾಶ ನೌಕೆಯ ವಿನ್ಯಾಸಗಳಿಗಾಗಿ ಸುಡುವ ಪರೀಕ್ಷೆಗಳು ಮತ್ತು ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳ ಬಗ್ಗೆ ಸಂಶೋಧನೆ ಸೇರಿದಂತೆ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಾರೆ.
ನಾಸಾ (NASA) ಗಗನಯಾತ್ರಿ ಡಾನ್ ಪೆಟ್ಟಿಟ್ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ದೃಶ್ಯಾವಳಿಗಳು ಕ್ರ್ಯೂ ವಾಹನವು ಭೂಮಿಯ ಸುತ್ತ ಸುತ್ತುತ್ತಿರುವಾಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ವನ್ನು ಸಮೀಪಿಸುತ್ತಿರುವುದನ್ನು ತೋರಿಸಿದೆ.