ಚೆನ್ನೈ: ‘ಶ್ರೀಲಂಕಾಗೆ ಬಿಟ್ಟುಕೊಟ್ಟಿರುವ ಕಚ್ಚಾ ತೀವು ದ್ವೀಪವನ್ನು ಭಾರತ ಸರ್ಕಾರವು ಮರಳಿ ಪಡೆದುಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಸರ್ವಾನುಮತದಿಂದ ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿತು.
‘ರಾಜ್ಯದ ಮೀನುಗಾರರು ಶ್ರೀಲಂಕಾ ನೌಕಾಪಡೆಯಿಂದ ಹಿಂಸೆ ಅನುಭವಿಸುತ್ತಿದ್ದಾರೆ. ಕಚ್ಚಾತೀವು ದ್ವೀಪವನ್ನು ಭಾರತವು ಮರಳಿ ಪಡೆದುಕೊಳ್ಳುವುದರಿಂದ ಮಾತ್ರವೇ ನಮ್ಮ ಮೀನುಗಾರರಿಗೆ ರಕ್ಷಣೆ ಸಿಗಲು ಸಾಧ್ಯ. ಇದೊಂದೇ ಪರಿಹಾರ ಇರುವುದು’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿಧಾನಸಭೆಗೆ ತಿಳಿಸಿದರು.
ಕಾಂಗ್ರೆಸ್, ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳೂ ಈ ನಿರ್ಣಯವನ್ನು ಬೆಂಬಲಿಸಿದವು.