ಬೈಲಹೊಂಗಲ :
ಮಳೆ ನೀರು ನಿಂತ ಮೇಲೆ ಹನಿಯೊಂದು ಕಾಡಿದೆ ಎನ್ನುವ ಹಾಗೆ..
ಮಳೆ ತಾತ್ಕಾಲಿಕವಾಗಿ ನಿಂತರು ಅದರ ಅವಾಂತರ ಹೇಳತೀರದು.
ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ರೈತರ ಜಮೀನಿನಲ್ಲಿ ಮೊಸಳೆ ಬಂದು ರೈತರು ಜೀವ ಭಯದಿಂದ ಕಾಲ ಕಳೆಯುವಂತಾಗಿದೆ.
ಎರಡು-ಮೂರು ದಿನಗಳ ಹಿಂದೆ ಬಾರಿ ಮಳೆಯಿಂದ ಗ್ರಾಮದ ಸೇತುವೆ ಮೇಲೆ ಮಲಪ್ರಭಾ ನದಿಗೆ ನೀರು ಹರಿದ ಪರಿಣಾಮ ನದಿಯಲ್ಲಿ ಮೊಸಳೆ ರೈತರ ಜಮೀನಿಗೆ ಬಂದಿದೆ.
ಬೆಳಗಿನ ಜಾವ ಗ್ರಾಮದ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಕಿರುಚ ತೊಡಗಿದಾಗ ರೈತ ಹೋಗಿ ನೋಡುವಷ್ಟರಲ್ಲಿ ನಾಯಿ ಮೊಸಳೆಯ ಬಾಯಿಗೆ ಆಹಾರವಾಗಿತ್ತು.
ಇದನ್ನು ನೋಡಿದ ರೈತ ಯುವಕರಿಗೆ ವಿಷಯ ಮುಟ್ಟಿಸಿರುವ ಕಬ್ಬು ಗದ್ದೆಗೆ ತೆರಳಿದ ಗ್ರಾಮದ ಯುವಕರ ತಂಡ ಕಬ್ಬು ಬೆಳೆಯಲ್ಲಿ ನಾಯಿ ತಿಂದ ಮೊಸಳೆ ಕಣ್ಣಿಗೆ ಬಿದ್ದಿದೆ.
ಭಯಭೀತರಾದ ಯುವಕರು ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ವಿಷಯ.
ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿ ಸುಳಿವೆ. ಆದರೆ ಮೊಸಳೆ ಮಾತ್ರ ತನ್ನ ದಾರಿಗೆ ಸುಂಕವಿಲ್ಲ ಎಂದು ಕಬ್ಬು ಬೆಳೆಗೆ ಹೋಗಲು
ಯತ್ನಿಸಿದವರ ತಂಡ ತಡ ಮಾಡದೆ ಕಬ್ಬು ಬೆಳೆ ತಗೆದು ಹಗ್ಗ ಬಳಸಿ ಮೊಸಳೆಯನ್ನು ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿಗಾಗಿ ಕಾಯುತ್ತಿದ್ದಾರೆ.
ವಿಷಯ ಆಸ್ಪತ್ರೆಯಲ್ಲಿ ನಿದ್ರೆಯಲ್ಲಿರುವ ಅರಣ್ಯ ಇಲಾಖೆ:
ಮೊಸಳೆ ಬಂದಿದೆ ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಕಚೇರಿಯಲ್ಲಿ ಬರುತ್ತೆವೆ, ಬರಲು ಎಲ್ಲ ಮಾಡಿಕೊಳ್ಳಲು ತಿದ್ದೆವೆ ಎಂದು ಹೇಳುತ್ತಾ ಅರ್ಧ ದಿನ ಕಳೆದರು ಇಲಾಖೆ ಸಿಬ್ಬಂದಿ ಮಾತ್ರ ಯಾರು ಇತ್ತ ಸುಳಿದಿಲ್ಲ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಿದ್ದ ಅರಣ್ಯ ಇಲಾಖೆ ಕಾಲಹರಣ ಮಾಡಿ ಬೇಜವಾಬ್ದಾರಿಯಿಂದ ನಡೆದುಕೊಂಡು ಬಂದ ನಂತರ ಪ್ರಾಣಿಗಳು ತಪ್ಪಿಸಿಕೊಂಡು ಹೋದ ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಳದಲ್ಲಿ ಬಿಡುವ ಅರಣ್ಯ ಇಲಾಖೆ ಕಾರ್ಯ ? ಎಂಬುವದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಗ್ರಾಮಸ್ಥರು ಸಿಬ್ಬಂದಿಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರೆ ಗ್ರಾಮದ ಯುವಕರ ಸಾಹಸವನ್ನು ಗ್ರಾಮಕ್ಕೆ ಕೊಂಡಾಡಿದೆ.