ಮುರಗೋಡ:
ಇತ್ತೀಚಿಗೆ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ರ್ಬರ ಹತ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಹಿತದೃಷ್ಟಿಯಿಂದ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ಮಠಗಳಿಗೆ ಸಿಪಿಐ ಮೌನೇಶ್ವರಮಾಲಿ ಪಾಟೀಲ ಭೇಟಿ ಭೇಟಿ
ನೀಡಿದರು. ನಂತರ ಮುರಗೋಡ (ಸ್ಥಳೀಯ) ಶ್ರೀ ಮಹಾಂತ ದುರದುಂಡೀಶ್ವರ ಮಠಕ್ಕೆ ಭಾನುವಾರ ಪೀಠಾಧಿಪತಿ ಶ್ರೀ ನೀಲಕಂಠ ಮಹಾ ಸ್ವಾಮೀಜಿ ಅವರಿಗೆ ಸಿಪಿಐ ಮೌನೇಶ್ವರಮಾಲಿ ಪಾಟೀಲ ಭೇಟಿ ನೀಡಿ, ಶ್ರೀಗಳೊಂದಿಗೆ ಸಮಾಲೋಚಿಸಿ ಅಗತ್ಯವಾಗಿ ಸಿಸಿ
ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಮೊಬೈಲ್ ಮೂಲಕ
ಅನಾಮಧೇಯ ಕರೆಗಳು ಬಂದರೆ ಹಾಗೂ ಶ್ರೀ ಮಠದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಆತಂಕ ಪಡದೆ ನಿರಾಳವಾಗಿರಬೇಕು ಎಂದು ಶ್ರೀಗಳಲ್ಲಿ
ವಿನಂತಿಸಿಕೊಂಡರು. ಇದೇ ವೇಳೆ ನೀಲಕಂಠ ಶ್ರೀಗಳು, ಮಾತನಾಡಿ, ಹಿರೇಕೋಡಿ ಜೈನ ಮುನಿಗಳ ಹತ್ಯೆ ಮಾಡಿದ್ದು ದುರದೃಷ್ಟಕರ. ಸಾಧು, ಸಂತರು, ಮುನಿಗಳು ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿವಾಗ ಇಂಥ ದುರ್ಘಟನೆ ನಡೆದಿರುವುದು ಖಂಡನೀಯ ಎಂದು ವಿಷಾದ ವ್ಯೆಕ್ತ ಪಡಿಸಿದರು. ನಿಂಗಪ್ಪ ತಲ್ಲೂರ, ಅಶೋಕ ಶೆಟ್ಟರ, ವೀರಭದ್ರಪೊ ದೇಸಾಯಿ, ಎಸ್.ಟಿ. ಪಟ್ಟಣಶೆಟ್ಟಿ, ಶಿವನಗೌಡ ಲಾಟೀಲ, ಸಂತೋಷ
ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.