ದೆಹಲಿ :
ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಇದೀಗ ಕ್ಷಣಗಣನೆ ನಡೆದಿದೆ. ಯಾವುದೇ ಹೊತ್ತಿನಲ್ಲಾದರೂ ಬಿಜೆಪಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ವರಿಷ್ಠರು ಈ ಬಗ್ಗೆ ಇಷ್ಟರಲ್ಲೇ ಹಸಿರು ನಿಶಾನೆ ತೋರಲಿದ್ದಾರೆ. ಒಟ್ಟಾರೆ ಎಲ್ಲರೂ ಕಾದು ಕುಳಿತಿರುವ ಬಿಜೆಪಿ ಪಟ್ಟಿ ಬಿಡುಗಡೆ ನಡೆಯಲಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ನಡೆದ ಬಿಜೆಪಿ ಟಿಕೆಟ್ ಚರ್ಚೆ ವಿಚಾರವಾಗಿ 2ನೇ ದಿನ ನಡೆದ ಸಭೆ ಭಾನುವಾರ ಅಂತ್ಯಗೊಂಡಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಸುದೀರ್ಘ 4 ಗಂಟೆಗಳ ಕಾಲ ಸಭೆ ನಡೆಯಿತು. ಬೆಳಗ್ಗೆ 11.40 ಗೆ ಸಭೆ ಆರಂಭವಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಿ ಟಿ ರವಿ ಸೇರಿ ಹಲವಾರು ಈ ಸಭೆ ಭಾಗಿಯಾಗಿದ್ದರು.
ಸಭೆ ಮುಗಿಸಿ ನಡ್ಡಾ ನಿವಾಸದಿಂದ ಸಿಎಂ ಬೊಮ್ಮಾಯಿ ಮತ್ತು , ಕಟೀಲ್ ತೆರಳಿದ್ದಾರೆ. ಸಂಜೆ 5 ಗಂಟೆಯ ಬಳಿಕ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯ ನಂತರ ಬೆಳಿಗ್ಗೆ ಮೊದಲ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಸಿ ಟಿ ರವಿ, ನಾವು ಪರಿಶೀಲನೆ ಮಾತ್ರ ಮಾಡಿದ್ದೇವೆ. ಸಂಸದೀಯ ಮಂಡಳಿ ಸಭೆಯಲ್ಲಿ ಎಲ್ಲಾ ತೀರ್ಮಾನ ಮಾಡ್ತಾರೆ. ಈ ಸಭೆ ಬಳಿಕ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿ ನೀಡ್ತಾರೆ. ನಾವು ಅಷ್ಟೂ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇವೆ. ಆದ್ರೆ ನಿರ್ಣಯ ನಮ್ಮದಲ್ಲ. ಅಂತಿಮ ತೀರ್ಮಾನ ತೆಗೆದುಕೊಳ್ಳೋದು ಪಾರ್ಲಿಮೆಂಟರಿ ಬೋರ್ಡ್ ಎಂದಿದ್ದಾರೆ.
ತಡರಾತ್ರಿಯ ವರೆಗೂ ನಡೆದ ಚರ್ಚೆ:
ಸಭೆ ಆರಂಭಕ್ಕೂ ಮುನ್ನ ಧರ್ಮೇಂದ್ರ ಪ್ರಧಾನ್ ನಿವಾಸಕ್ಕೆ ಸಿಎಂ ಬೊಮ್ಮಾಯಿ ತೆರಳಿದ್ದರು. ಶನಿವಾರ ತಡರಾತ್ರಿಯವರೆಗೂ ಟಿಕೆಟ್ ವಿಚಾರವಾಗಿ ಚರ್ಚೆ ನಡೆದಿತ್ತು. ಅಪ್ಪ-ಮಕ್ಕಳಿಗೆ ಟಿಕೆಟ್ ನೀಡುವ ವಿಚಾರವಾಗಿ ಗಂಭೀರವಾಗಿ ಚರ್ಚೆ ನಡೆದಿತ್ತು. ಕಾರ್ಯಕರ್ತರು ಯಾರಿಗೆ ಮಣೆ ಹಾಕಿದ್ದರೂ ಅವರಿಗೆ ಟಿಕೆಟ್ ನೀಡುವ ಬಗ್ಗೆ ಅಮಿತ್ ಷಾ ಒನ್ ಲೇನ್ ತೀರ್ಮಾನ ಹೇಳಿದ್ದರು. ಸಂಸದರು, ಮಠಗಳ ಒತ್ತಡಕ್ಕೆ ಸಿಲುಕಿ ಟಿಕೆಟ್ ನೀಡದಿರಲು ತೀರ್ಮಾನ. ಗೆಲ್ಲುವೊಂದೇ ಮಾನದಂಡ ಎಂದು ಅಮಿತ್ ಶಾ ಸಭೆಯಲ್ಲಿ ಹೇಳಿದ್ದರು ಎನ್ನಲಾಗಿದೆ.ನಿನ್ನೆ 12 ಗಂಟೆಗಳ ಸುಧೀರ್ಘ ನಾಯಕರು ಸಭೆ ನಡೆಸಿದ್ದರು. ಅದಕ್ಕೂ ಮುನ್ನ ರಾಜ್ಯ ನಾಯಕರನ್ನು ಹೊರಗಿಟ್ಟು ವರಿಷ್ಠರು ಸಭೆ ನಡೆಸಿದ್ದರು.
ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್?
ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸೋಮವಾರ ಮುಹೂರ್ತ ಇಡಲಾಗಿದೆಯಂತೆ. ಮೊದಲ ಪಟ್ಟಿಯಲ್ಲಿ ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಗೆ ಬಿಜೆಪಿ ಸಿದ್ದಗೊಂಡಿದೆ ಎನ್ನಲಾಗಿದೆ. ಸಭೆಯಲ್ಲಿ ಬಿಜೆಪಿ ಅಂತಿಮ ಪಟ್ಟಿ ತೀರ್ಮಾನವಾಗಲಿದೆ.
ಶನಿವಾರ ಸುದೀರ್ಘ 12 ಗಂಟೆಗಳ ಕಾಲ ಸಭೆ ಜೆ ಪಿ ನಡ್ಡಾ ನಡೆಸಿದ್ದರು. ಸಭೆಯಲ್ಲಿ 170-180 ಕ್ಷೇತ್ರಗಳ ಬಗ್ಗೆ ವಿಸ್ಕೃತ ಚರ್ಚೆ ನಡೆದಿತ್ತು. ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. 20-25 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿ ಹಾಕಲು ಚಿಂತನೆ ನಡೆದಿದೆ. ಸಂಜೆ ಸಂಸದೀಯ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಿಕ್ರೆ ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಲಿದೆ.