ಮೂಡಲಗಿ :
ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಏಜೆಂಟರ ಹಾವಳಿ ಮಿತಿ ಮೀರಿದೆ.
ನೋಂದಣಿಗಾಗಿ ₹ 1ಸಾವಿರದಿಂದ ₹ 5 ಸಾವಿರದವರೆಗೆ ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪಗಳು ಇದೆ. ಮದುವೆ ನೋಂದಣಿಗೆ ₹ 5ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಏಜೆಂಟರು. ಹಣ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ. ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ-ನೋಂದಣಾಧಿಕಾರಿ ಹರಿಯಪ್ಪ ವೇಳೆಗೆ ಸರಿಯಾಗಿ ಬರದೆ ಮುಂಜಾನೆ 11-30 ಕ್ಕೆ ಕಚೇರಿಗೆ ಬರುವುದು ಹಾಗೂ ವಿವಾಹ ನೋಂದಣಿಗೆ ನೇರವಾಗಿ ಸಾರ್ವಜನಿಕರು ಕಚೇರಿಗೆ ಹೋದರೆ ಮಧ್ಯಾಹ್ನದ ನಂತರ ಬನ್ನಿ ಅಂತ ಹೇಳುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದು, ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ದುರಂತ ಎಂದರೆ ವಿವಾಹ ನೋಂದಣಿಗೆ ಸರ್ಕಾರಿ ಶುಲ್ಕ ಇರುವುದೇ 450 ರೂಪಾಯಿ. ಆದರೆ ಏಜೆಂಟರು ಸಾರ್ವಜನಿಕರ ಹತ್ತಿರ ಸುಲಿಗೆ ಮಾಡುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇದೆ ರೀತಿಯಾಗಿ ಮುಂದುವರೆದಲ್ಲಿ ವಿವಿಧ ಸಂಘಟನೆಗಳು ಹೋರಾಟ ಮಾಡುವುದರಲ್ಲಿ ಸಂದೇಹವಿಲ್ಲ.
- ಮೂಡಲಗಿಯಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ. ಏಜೆಂಟರ ಹಾವಳಿಗೆ ಕಂಗಾಲಾದ ಸಾರ್ವಜನಿಕರು. ಸಾರ್ವಜನಿಕರಿಗಿಂತ ಏಜೆಂಟರ ಹಾವಳಿ. ಪ್ರತಿಯೊಂದು ಟೇಬಲ್ ಗೆ ಕೊಡಲೇಬೇಕು ಹಪ್ತ. ಸರ್ಕಾರದ ಎಲ್ಲಾ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಿದ್ದಾರೆ. ನೋಂದಣಿ ಅಧಿಕಾರಿಗೆ ಬೇರೆ ಹಣ. ಕಂಪ್ಯೂಟರ್ ಆಪರೇಟರಿಗೆ ಬೇರೆ ಹಣ. ಇಲ್ಲಿ ದುಡ್ಡಿದ್ದರೆ ಮಾತ್ರ ಕೆಲಸ. ಕೆಲವು ದಾಖಲಾತಿಗಳು ಇಲ್ಲದೆ ನೋಂದಣಿ ಮಾಡುತ್ತಿರುವುದು ಕೂಡ ಇಲ್ಲಿ ನಡೆಯುತ್ತಿದೆ. ಏಜೆಂಟರ ಮಹಿಮೆಯಿಂದ ಕೋಟ್ಯಾಧೀಶ್ವರರಾಗಿರುವ ನೋಂದಣಿ ಅಧಿಕಾರಿಗಳು. ಲಂಗೂ ಲಗಾಮು ಇಲ್ಲದೆ ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಹಣ ವಸೂಲಿ. ಕಣ್ಣಿದ್ದು ಕೂರಡರಂತೆ ಮೌನವಾಗಿರುವ ಸ್ಥಳೀಯ ಶಾಸಕರು. ಯಾರಿಗೆ ಹೇಳೋಣ ನಮ್ ಸಮಸ್ಯೆ. ಈ ನೊಂದಣಿ ಕಚೇರಿಯನ್ನು ಬೇಡಿ ಪಡೆದಿದ್ದು ಇದಕ್ಕೆನಾ????. ತಾಲೂಕಿನ ಹೋರಾಟಗಾರರು ಮೌನ ವಹಿಸಿದ್ದು ಏಕೆ??
- ಗುರು ಗಂಗನ್ನವರ
ಸಾಮಾಜಿಕ ಹೋರಾಟಗಾರ