ಬೆಳಗಾವಿ
ಗಾಣಿಗ ಸಮಾಜ ಹಲವಾರು ವರ್ಷಗಳಿಂದ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳವನ್ನು ಸ್ಥಾಪನೆ ಮಾಡಬೇಕೆಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅದರ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಗಮ ಮಂಡಳ ಸ್ಥಾಪನೆ ಮಾಡಿರುವುದು ಸಂತಸದ ಸಂಗತಿ ಎಂದು ಗಾಣಿಗ ಸಮಾಜದ ಮುಖಂಡ ರಮೇಶ ಉಟಗಿ ಹೇಳಿದರು.
ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗಾಣಿಗ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢವಾಗಬೇಕು. ನಮ್ಮ ಸಮಾಜಕ್ಕೆ ನಿಗಮ ಮಂಡಳ ರಚನೆಯಾಗಬೇಕೆಂದು ಹೋರಾಟ ಆರಂಭಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿಗಮ ಮಂಡಳ ರಚನೆ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಾಣಿಗ ನಿಗಮ ಮಂಡಳಿ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಎಂದರು.
ಗಾಣಿಗ ಸಮಾಜದ ಡಾ. ಜಯಬಸವ ಸ್ವಾಮೀಜಿ ಅವರು ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದೆವು. ಸಮಾಜ ವಿವಿಧ ಮಠಾಧೀಶರು ಗಾಣಿಗ ಸಮಾಜಕ್ಕೆ ನಿಗಮ ಮಂಡಳ ರಚನೆ ಮಾಡಬೇಕೆಂದು ಹೋರಾಟ ನಡೆಸಿದ್ದರು. ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಪಡೆಯಲು ನಾವು ಯಶಸ್ವಿಯಾಗಿದ್ದೇವೆ ಎಂದರು.
ಈ ಹಿಂದೆ ಹಲವಾರು ಸಮಾಜದವರಿಗೆ ನಿಗಮ ಮಂಡಳಿ ನೀಡಿದರು. ಕಳೆದ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದೆವು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
ರಮೇಶ ಉಟಗಿ, ಶೋಭಾ ಗಾಣಿಗೇರ, ಪ್ರಕಾಶ ಬಾಳೇಕುಂದ್ರಿ, ಎಸ್.ಎಂ.ಕಲೂತಿ, ಕಲ್ಲಪ್ಪ ಗಾಣಿಗೇರ, ಮಲ್ಲಪ್ಪ ಸಿದ್ದಣ್ಣವರ, ಅಡಿವೆಪ್ಪ ಕೋಟಗಿ, ಗಂಗಾಧರ ಗಿರಿಜಣ್ಣವರ, ಜಗದೀಶ ಬಿಕ್ಕಣ್ಣವರ, ಗಂಗಾಧರ ಮಡ್ಡಿಮನಿ ಸೇರಿದಂತೆ ಗಾಣಿಗ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.