” ಆಟವನ್ನು ಇನ್ನೂ ಚೆನ್ನಾಗಿ ಆಡುತ್ತಿರುವಾಗಲೇ
ಆಟವನ್ನು ಬಿಟ್ಟುಕೊಟ್ಟು ನಿರ್ಗಮಿಸು ” ಎಂಬ ಮಾತು
ಇಂಗ್ಲೀಷ್ ನಲ್ಲಿದೆ. ಈ ಮಾತು ಕೆ ಎಲ್ ಈ ಸಂಸ್ಥೆಯ ರೂವಾರಿ ಶ್ರೀ ಪ್ರಭಾಕರ ಕೋರೆ ಅವರಿಗೆ ಚೆನ್ನಾಗಿ
ಅನ್ವಯಿಸುತ್ತದೆ.
ಇದೀಗ ನಡೆದ ಕೆ ಎಲ್ ಈ ಚುನಾವಣೆಯ
ಫಲಿತಾಂಶ ಪ್ರಕಟವಾಗಿದೆ. ಅವರು ಪ್ರಕಟಿತ ಪಟ್ಟಿಯಲ್ಲಿ
ಅವರಿಲ್ಲ. ಅವರ ಮಗಳು ಹಾಗೂ ಮಗ ಇದ್ದಾರೆ.
ಕೆ ಎಲ್ ಈ ಸಂಸ್ಥೆಯ ಅಧ್ಯಕ್ಷರಾಗಿ ಕೋರೆಯವರ ಸಹೋದರ ದಿ. ಚಿದಾನಂದ ಕೊರೆಯವರು
ಸೇವೆ ಸಲ್ಲಿಸುತ್ತಿದ್ದ ಕಾಲದಿಂದಲೂ ಸಂಸ್ಥೆಯನ್ನು ಅತ್ಯಂತ
ಸಮೀಪದಿಂದ ನಾನು ಬಲ್ಲೆ. 1980 ರ ದಶಕದ
ಆರಂಭದಲ್ಲಿ ಬೈಲಹೊಂಗಲದ ಹಿರಿಯ ಮುತ್ಸದ್ದಿ
ಶ್ರೀ ಶಿವಾನಂದ ಕೌಜಲಗಿ ಅವರು ನಮ್ಮ ರಾಮದುರ್ಗ
ಮನೆಯಲ್ಲಿ ಎರಡು ಕೆ ಎಲ್ ಈ ಸದಸ್ಯತ್ವಗಳನ್ನು
ಕೊಟ್ಟಿದ್ದರು. ನನ್ನ ತಂದೆ ದಿ. ಯಂಕಪ್ಪಾ ಚಂದರಗಿ ಹಾಗೂ
ನನ್ನ ಅಣ್ಣ ಶ್ರೀ ಮಾರುತಿ ಚಂದರಗಿ. ಕೇವಲ 200 ರೂ. ಶುಲ್ಕ. ಬೆಳಗಾವಿಯಲ್ಲಿ ಪತ್ರಕರ್ತನ್ನಾಗಿ ಕೆಲಸ
ಆರಂಭಿಸಿದ್ದ ನಾನು ಸದಸ್ಯತ್ವವೇ ಬೇಡ ಎಂದಿದ್ದೆ. ನನ್ನ
ತಂದೆ 1999 ರಲ್ಲಿ ನಿಧನರಾದರು. ನನ್ನ ಅಣ್ಣನ
ಸದಸ್ಯತ್ವ ಇದೆ.
40 ವರ್ಷಗಳ ಸುದೀರ್ಘ ಸೇವೆಯ ನಂತರ
ಕೊರೆಯವರು ನಿರ್ದೇಶಕ ಸ್ಥಾನದಿಂದ ಹೊರಗೆ
ಬಂದಿದ್ದಾರೆ. ಅವರ ಸ್ಥಾನವನ್ನು ಯಾರು ತುಂಬುತ್ತಾರೆ
ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾರೇ ತುಂಬಿದರು ಸಹ
ಕೊರೆಯವರ ಗೈರು ಹಾಜರಿ ಅಲ್ಲಿ ಎದ್ದು ಕಾಣುವದು
ಪಕ್ಕಾ. ಅವರು ಸ್ವತಃ ಇರುವದಕ್ಕೂ ಬೇರೆಯವರಿಂದ
ಕೆಲಸ ಮಾಡಿಸುವದಕ್ಕೂ ವ್ಯತ್ಯಾಸವಿದ್ದೇ ಇದೆ.
ಕೊರೆಯವರ ಶಿಸ್ತು ಹಾಗೂ ಕ್ರಿಯಾಶೀಲತೆಯ
ಪರಿಣಾಮವಾಗಿಯೇ ಸಂಸ್ಥೆಯು ಆಕಾಶದೆತ್ತರಕ್ಕೆ
ಬೆಳೆದಿದೆ. ಅವರ ಸೇವೆಯನ್ನು ಸಮಾಜ ಇನ್ನೂ
ಪಡೆಯಬೇಕಾಗಿದೆ. ಸತತವಾಗಿ ಒದ್ದಾಡುತ್ತಲೇ ಇರುವದೇ
ಅವರ ಆರೋಗ್ಯದ ಗುಟ್ಟೂ ಹೌದು.
ಕೊರೆಯವರಿಗೆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಕೊಡಲಿ, ಅವರ ಸೇವೆ ಸಮಾಜಕ್ಕೆ ಸಿಗಲಿ ಎಂದು
ಪ್ರಾಂಜಲ ಮನಸ್ಸಿನಿಂದ ಹಾರೈಸುತ್ತೇನೆ.
ಅಶೋಕ ಚಂದರಗಿ
ಬೆಳಗಾವಿ


