ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ಬಂಧಿತ ಆರೋಪಿ. ಫೆ.14ರಂದು ಉದ್ಯಮಿ ಬಸವರಾಜ್ ಅಂಬಿ ಎಂಬುವರನ್ನು ಅಪಹರಿಸಿದ್ದ ಮಂಜುಳಾ ಹಾಗೂ ಗ್ಯಾಂಗ್ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿದಾಗ ಆರೋಪಿಗಳು ಕಿಂಗ್ ಪಿನ್ ಮಂಜುಳಾ ಹೆಸರು ಬಾಯ್ಬಿಟ್ಟಿದ್ದರು.
ಕಿಂಗ್ ಪಿನ್ ಮಂಜುಳಾ ಕಾಂಗ್ರೆಸ್ ಕಾರ್ಯಕರ್ತೆ, ತಾನು ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ಇದೀಗ ಮಂಜುಳಾಳನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.