This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದಿಂದ ಎನ್.ಎಸ್.ಎಸ್. ಕೋಶ ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪ K.L.E. from an autonomous university N.S.S. Conclusion of Kosha National Integration Camp


 

ಬೆಳಗಾವಿ :                                                  ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ರಾಷ್ಟೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಾಗೂ ರಾಷ್ಟೀಯ ಸೇವಾ ಯೋಜನೆ, ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರದ ಬೆಂಬಲದೊಂದಿಗೆ ರಾಷ್ಟ್ರೀಯ ಏಕೀಕರಣ ಶಿಬಿರವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಆವರಣದಲ್ಲಿ ಏಕೀಕರಣದ ಮೂಲಕ ಸುಸ್ಥಿರ ಅಭಿವೃದ್ದಿಯ ಕಡೆಗೆ ಸಣ್ಣ ಬದಲಾವಣೆಗಳು ಎಂಬ ಶೀರ್ಷಿಕೆಯೊಂದಿಗೆ ಜ.17 ರಿಂದ 23 ರವರೆಗೆ ಆಯೋಜಿಸಲಾಗಿತ್ತು.

ಶಿಬಿರದ ಸಮಾರೋಪ ಸಮಾರಂಭವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಏಳು ದಿನಗಳ ಕಾಲ ಜರುಗಿದ ಈ ಶಿಬಿರದಲ್ಲಿ ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಂದ ಒಟ್ಟು 150 ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ರಂಗೋಲಿ, ರಸಪ್ರಶ್ನೆ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ ಕಾರ್ಯಕ್ರಮ ಮತ್ತು ಹೊರವಲಯ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ
ಪ್ರತಾಪಲಿಂಗಯ್ಯ ಕಾರ್ಯಕ್ರಮದ ಕುರಿತು ಭಾಷೆ, ಜಾತಿ ಮತ್ತು ಪ್ರದೇಶದ ವ್ಯತ್ಯಾಸಗಳನ್ನು ಮರೆತು ರಾಷ್ಟ್ರೀಯ ಏಕೀಕರಣದ ಬಗೆ ಕಲಿಯಬೇಕೆಂದು ಹೇಳಿದರು. ರಾಷ್ಟ್ರೀಯ ಏಕೀಕರಣ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯವನ್ನು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ
ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿ ಡಾ. ನಿತಿನ್ ಗಂಗನೆ ಕೆ.ಎಲ್.ಇ. ವಿಶ್ವವಿದ್ಯಾಲಯವು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಮತ್ತು ವಿದ್ಯಾರ್ಥಿಗಳು ಶಿಬಿರದ ಸಮಯದಲ್ಲಿ ಕಲಿತ ಕೌಶಲ್ಯಗಳನ್ನು ತಮ್ಮ ಸಮುದಾಯದ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಮಯದಲ್ಲಿ ವಿವಿಧ ರಾಜ್ಯಗಳಿಂದ ಭಾಗವಹಿಸಿದ ಎಲ್ಲಾ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಕೆಎಲ್ಇ ಜೆ ಎನ್ ಎಂ ಸಿ ಪ್ರಾಚಾರ್ಯ ಡಾ.ಎನ್. ಎಸ್. ಮಹಾಂತಶೆಟ್ಟಿ ಪಾಲ್ಗೊಂಡಿದ್ದ ಎಲ್ಲರನ್ನು ಅಭಿನಂದಿಸಿದರು. ಕುಲ ಸಚಿವ ಡಾ. ವಿ.ಎ.ಕೋಠಿವಾಲೆ ಸ್ವಾಗತಿಸಿದರು. ವೀರಕುಮಾರ ಜಪ್ತಿ ಪರಿಚಯಿಸಿದರು. ಕೆ.ಎಲ್.ಇ. ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾ ಅಧಿಕಾರಿ ಡಾ. ಅಶ್ವಿನಿ ನರಸನ್ನವರ ವಂದಿಸಿದರು.


Jana Jeevala
the authorJana Jeevala

Leave a Reply