ತಿರುವನಂತಪುರ: ಕೇರಳದಲ್ಲಿ ಜೂನ್ 2 ರಿಂದ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ರೊಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.
ಇದರಿಂದ 4.3 ಲಕ್ಷ ವಿದ್ಯಾರ್ಥಿಗಳು ರೊಬೊಟಿಕ್ಸ್ ಶಿಕ್ಷಣ ಪಡೆಯಲಿದ್ದಾರೆ.
ಹತ್ತನೇ ತರಗತಿಯ ಐಸಿಟಿ ಪಠ್ಯಪುಸ್ತಕದಲ್ಲಿ, ವಿಶೇಷವಾಗಿ ಮೊದಲ ಸಂಪುಟದಲ್ಲಿರುವ ‘ದಿ ವರ್ಲ್ಡ್ ಆಫ್ ರೊಬೊಟ್ಸ್’ ಎಂಬ ಶೀರ್ಷಿಕೆಯ ಆರನೇ ಅಧ್ಯಾಯಕ್ಕೆ ರೊಬೊಟಿಕ್ಸ್ ಅನ್ನು ತೊಡಗಿಸಿಕೊಳ್ಳಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಆಕರ್ಷಕ ಚಟುವಟಿಕೆಗಳು, ರೊಬೊಟಿಕ್ಸ್ ಪರಿಕಲ್ಪನೆ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಅಧ್ಯಾಯದಲ್ಲಿ ಸರ್ಕ್ಯೂಟ್ ನಿರ್ಮಾಣ, ಸಂವೇದಕಗಳು ಮತ್ತು ಆಕ್ಟಿವೇಟರ್ಗಳನ್ನು ಬಳಸುವುದು ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಳಸಿ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ಕುರಿತಾದ ಮಾಹಿತಿಯಿದೆ ಎಂದು ಹೇಳಲಾಗಿದೆ.