ಬೆಳಗಾವಿ : ಕೆ ಕೆ ಕೊಪ್ಪ ಗ್ರಾಮದ ಶ್ರೀಮತಿ ಸೋಮವ್ವ ಚನ್ನಪ್ಪ ಅಂಗಡಿ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ 09.10.2025 ರಂದು “ಯುವ ಪ್ರತಿಭಾ 2025 ವಿಂಗ್ಸ್ ಆಫ್ ಟ್ಯಾಲೆಂಟ್” ಕಾರ್ಯಕ್ರಮದಲ್ಲಿ ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ (ಜಕ್ಕೇರಿ ಹೊಂಡ ಭಾಗದ) ವಾಣಿಜ್ಯ ಮಹಾವಿದ್ಯಾಲಯವು ಜನರಲ್ ಚಾಂಪಿಯನ್ ಶಿಪ್ ಸ್ಥಾನವನ್ನು ಪಡೆದುಕೊಂಡಿದೆ.
ಅಣುಕು ನಾಟಕ ಪ್ರದರ್ಶನ (ಮೈಮ್) ದಲ್ಲಿ ಪ್ರಥಮ ಸ್ಥಾನ, ಹಾಗೂ ಪಿಕ್ ಅಂಡ್ ಸ್ಪೀಚ್ ದಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.
ತಂಡದ ಎಲ್ಲ ಸರ್ವ ಸದಸ್ಯರನ್ನು
ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಮತ್ತು ಸರ್ವ ಸದಸ್ಯರು ,ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಕವಟಗಿಮಠ ಅವರು ಮತ್ತು ಸರ್ವ ಸದಸ್ಯರು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು, ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.