ಕಂದಾಯ ಭೂಮಿಯಲ್ಲಿ ಅಕ್ರಮ ಲೇಔಟ್, ಗ್ರಾಪಂ ದೂರು ಕೊಟ್ಟರು ಕ್ರಮ ಕೈಗೊಳ್ಳದ ಇಲಾಖೆ..!
ಗ್ರಾಪಂ ಎಚ್ಚರಿಸಿದರೂ ಬಹುಗ್ರಾಮ ನೀರಿನ ಪೈಪ್ಲೈನ್ ಮೇಲೆ ಕಾಂಕ್ರೀಟ್ ಹಾಕಿ ಗುಂಡಾಗಿರಿ..!
ಲಕ್ಷ ಲಕ್ಷ ಡೀಲ್ ಮಾಡಿಕೊಂಡು ಅಕ್ರಮಕ್ಕೆ ಜೈ ಎಂದ್ರಾ ಇತರೆ ಅಧಿಕಾರಿಗಳು..?
ಬಡವರ ಮೇಲೆ ಬ್ರಹ್ಮಾಸ್ತ್ರ ಬಿಡುವ ಮೇಲಾಧಿಕಾರಿಗಳಿಗೆ ಎಲ್ಲಿದ್ದೀರಾ..?
ಬೆಳಗಾವಿ: ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರದಲ್ಲಿ ಈಗ ಅಕ್ರಮ ಲೇಔಟ್ ಗಳ ಹಾವಳಿ ಹೆಚ್ಚಾಗಿದ್ದು ಅದಕ್ಕೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಲಕ್ಷ ಲಕ್ಷ ಡೀಲ್ ಮಾಡಿಕೊಂಡು ಕಣ್ಮುಚ್ಚಿ ಕುಳಿತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಅಗಸಗಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ಬರುವ ಕೃಷಿ ಭೂಮಿಯಲ್ಲಿ ಹೊರಗಡೆಯಿಂದ ಬಂದ ರಿಯಲ್ ಎಸ್ಟೇಟ್ ದಂಧೇಕೋರನೊಬ್ಬ ರಸ್ತೆ ಪಕ್ಕಕ್ಕೆ ಇರುವ ಒಂದು ಎಕರೆ ಕೃಷಿ ಭೂಮಿ ಖರೀದಿ ಮಾಡಿ ಅದರಲ್ಲಿ ಅಕ್ರಮ ಲೇಔಟ್ ಹಾಕಿ ಹೊರಗಿನ ಜನರಿಗೆ ಮಾರಾಟ ಮಾಡಿ ಕೋಟಿ ಕೋಟಿ ಹಣ ಮಾಡಿಕೊಂಡಿದ್ದಾನೆ. ಅದರಲ್ಲಿ ಸ್ವಲ್ಪ ಭಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಟ್ಟು ಅವರ ಬಾಯಿ ಮುಚ್ಚಿಸಿ
ಮತ್ತೊಂದು ಕೃಷಿ ಭೂಮಿಯಲ್ಲಿ ಇದೆ ರೀತಿ ಮಾಡುತ್ತ ಸಾಗುತ್ತಿದ್ದಾನೆ.
ಈತನ ಈ ಅಕ್ರಮ ದಂಧೆಯಿಂದಾಗಿ ಈಗಾಗಲೇ ಹಲವೆಡೆ ಅನೇಕ ಅನಾಹುತಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಲಂಚ ಪಡೆದಿದ್ದರಿಂದ ಕೈಗೆ ಕೊಳ ಹಾಕಿಕೊಂಡಂತಾಗಿದೆ.
ಸಾರ್ವಜನಿಕ ಉಪಯೋಗಕ್ಕಾಗಿ ಒಂದಿಚ್ಚು ಜಾಗ ಬಿಡದೆ ಮಾರಾಟ..!
ಈಗ ಆ ಅಕ್ರಮ ಲೇಔಟ್ ಗಳಲ್ಲಿ ಸೈಟ್ ತೆಗೆದುಕೊಂಡವರು ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆಯದೇ ಕಟ್ಟಡ ಕಾಮಗಾರಿಗಳನ್ನು ಶುರುಮಾಡಿದ್ದಾರೆ. ಗ್ರಾಪಂ ಎಚ್ಚರಿಸಿದರೂ ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಮೇಲೆ ಕಾಂಕ್ರೀಟ್ ಹಾಕಿ ಗುಂಡಾಗಿರಿ ಮೆರೆಯುತ್ತಿದ್ದಾನೆ.
ದೌರ್ಭಾಗ್ಯ ಎಂದರೆ ಈ ಒಂದು ಎಕರೆ ಜಾಗದಲ್ಲಿ ಒಂದಿಂಚು ಸಾರ್ವಜನಿಕ ಉಪಯೋಗಕ್ಕೆ ಜಾಗ ಬಿಡದೆ ಲೇಔಟ್ ಹಾಕಿ ಮಾರಾಟ ಮಾಡಲಾಗಿದೆ. ಇದು ಗ್ರಾಮದವರಿಗೆ ಮಾರಾಟ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ದಂಧೇಕೋರ ಹೊರಗಿನವರಿಗೆ ಹಾಗೂ ಅನ್ಯ ಧರ್ಮದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಅವಾಂತರ ಸೃಷ್ಟಿ ಮಾಡಿದ್ದಾನೆ.
ಅಗಸಗಿ ಗ್ರಾಮಕ್ಕೆ ಇಲ್ಲ ಒಂದಿಂಚು ಸರ್ಕಾರಿ ಜಾಗ..!
ಸದ್ಯ ಆಗಸಗಿ ಗ್ರಾಮದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಸಾರ್ವಜನಿಕ ಉಪಯೋಗಕ್ಕಾಗಿ ಕೊಡಲು ಒಂದಿಂಚು ಜಾಗ ಸಹ ಉಳಿದಿಲ್ಲ. ಈಗಾಗಲೇ ಬಸ್ಟ್ಯಾಂಡ್, ಸಮುದಾಯ ಭವನ, ಹುತಾತ್ಮ ಯೋಧನ ಸ್ಮಾರಕ, ಮಹಾಪುರುಷರ ಪುತ್ತಳಿಗಳಿಗೆ, ಸ್ಮಶಾನ, ಪಶು ಕೇಂದ್ರ, ತಲಾಠಿ ಕಛೇರಿ, ಸಾರ್ವಜನಿಕ ಮೂತ್ರಾಲಯ ಸೇರಿ ಯಾವುದೇ ಯೋಜನೆಗೆ ಕೊಡಲುಒಂದಿಂಚು ಜಾಗ ಸಹ ಇಲ್ಲ. ಇದಕ್ಕಾಗಿ ಈಗಾಗಲೇ ಹೊರಾಟಗಳು ನಡೆದಿವೆ. ಅಂತಹದರಲ್ಲಿ ಈ ರಿಯಲ್ ಎಸ್ಟೇಟ್ ಲೂಟಿಕೋರ ಈತ ಹಾಕಿರುವ ಲೇಔಟ್ ನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಒಂದಿಂಚು ಜಾಗ ಸಹ ಬಿಟ್ಟಿಲ್ಲ. ಅದಲ್ಲದೆ ನೂರಾರು ವರ್ಷಗಳಿಂದ ಜಮೀನಿಗೆ ಹೋಗುವ ದಾರಿಯನ್ನು ಮುಚ್ಚಿ ಹಾಕಿದ್ದಾನೆ. ಮೇಲಾಗಿ ಅನ್ಯ ಧರ್ಮೀಯರಿಗೆ ಮಾರಾಟ ಮಾಡಿರುವುದರಿಂದ ಒಂದು ದಿನ ರಸ್ತೆ ಮೇಲೆ ಹೆಣ ಹೂಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದು ಗ್ರಾಮಕ್ಕೆ ಬಂದಿರೋ ಮತ್ತೊಂದು ದೊಡ್ಡ ಸಂಕಟವಾಗಿದೆ.
ಬಡವರ ಮೇಲೆ ಬ್ರಹ್ಮಾಸ್ತ್ರ ಮಾಡುವ ಮೇಲಾಧಿಕಾರಿಗಳು ಎಲ್ಲಿದ್ದೀರಾ..?
ಬಡವರು ಸರಕಾರದಿಂದ ಯಾವುದೇ ಸೇವೆ, ಯೋಜನೆ ಪಡೆಯಬೇಕಾದರೆ ನೂರಾರು ಕಾನೂನುಗಳನ್ನು ಹಾಕುತ್ತಾರೆ ಈ ಅಧಿಕಾರಿಗಳು. ಆದರೆ ಈ ಅಕ್ರಮ ಲೇಔಟ್ ದಂಧೆ ಕೋರ ಮಾರಾಟ ಮಾಡಿರುವ ಸೈಟ್ ಗಳಿಗೆ ಲಕ್ಷ ಲಕ್ಷ ಪಡೆದು ಪರವಾನಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ನೋಡಿದ ಬಡಜನ ಈ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅಗಸಗಿ ಗ್ರಾಮ ಪಂಚಾಯತಿಯವರು ಈಗಾಗಲೇ ಪಿಡಬ್ಲ್ಯೂಡಿ, PRD, ಕಂದಾಯ ಇಲಾಖೆಯವರಿಗೆ ಈ ಅಕ್ರಮ ಲೇಔಟ್ ಬಗ್ಗೆ ದೂರು ನೀಡಿದ್ದು, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದ ನೋಡಬೇಕಿದೆ.


